×
Ad

ಪ್ರತ್ಯೇಕ ಪ್ರಕರಣ : ಇಬ್ಬರ ನಾಪತ್ತೆ

Update: 2021-01-30 21:18 IST

ಹೆಬ್ರಿ, ಜ.30: ಹೆಬ್ರಿ ಪೇಟೆಯಲ್ಲಿ ಮೊಬೈಲ್ ರಿಪೇರಿ ಮಾಡಿಕೊಂಡು ಬರುವುದಾಗಿ ಹೇಳಿ ಮನೆಯಿಂದ ಜ.28ರಂದು ಸಂಜೆ ವೇಳೆ ಬೈಕಿನಲ್ಲಿ ಹೋದ ಹೆಬ್ರಿ ಯಳಾಳಿ ನಿವಾಸಿ ಮಹಾಬಲ ಪೂಜಾರಿ ಎಂಬವರ ಮಗ ದಿಕ್ಷಿತ್(26) ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ: ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಕಾರ್ಕಡ ಗ್ರಾಮದ ಬಳ್ಳಿಕೆರೆ ನಿವಾಸಿ ಅಶೋಕ ಪೂಜಾರಿ(35) ಎಂಬವರು ಜ.13 ರಂದು ರಾತ್ರಿ 8 ಗಂಟೆಗೆ ಕೆಲಸ ಇದೆ ಎಂದು ಹೇಳಿ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News