ಸಂಪತ್ತುಗಳಲ್ಲಿನ ಶುದ್ಧತೆಗೆ ಆದ್ಯತೆ ಕೊಡಲು ಬದ್ಧರಾಗಿ : ಅಬ್ದುಲ್ಲಾ ಫೈಝಿ ಕೊಡಗು
ಮಂಗಳೂರು : ಮನುಷ್ಯನು ತನ್ನ ಜೀವನದಲ್ಲಿ ಗಳಿಸುವ ಸಂಪತ್ತುಗಳಲ್ಲಿನ ಶುದ್ಧತೆಗೆ ಆದ್ಯತೆ ನೀಡಿ, ಕಲುಷಿತ ರಹಿತ ಸಂಪತ್ತು ಗಳಿಸಲು ಒತ್ತು ಕೊಡಬೇಕಾಗಿದೆ ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ಲಾ ಫೈಝಿ ಕೊಡಗು ಕರೆ ನೀಡಿದರು..
ಅವರು ಮಂಗಳೂರಿನಲ್ಲಿ ನಡೆದ ರಾಜ್ಯ ಫೈಝೀಸ್ ಸಂಗಮ ಉದ್ಘಾಟಿಸಿ ಮಾತನಾಡಿದರು. ಫೈಝೀಸ್ ರಾಜ್ಯಾಧ್ಯಕ್ಷ ಉಸ್ಮಾನ್ ಫೈಝಿ ತೋಡಾರ್ ಅಧ್ಯಕ್ಷತೆ ವಹಿಸಿದ್ದರು.
ಪಟ್ಟಿಕ್ಕಾಡ್ ಜಾಮಿಅ: ಪ್ರೊಫೆಸರ್ ಉಸ್ತಾದ್ ಹಂಝ ಫೈಝಿ ಹೈತಮಿ "ಮಲ್ಟಿ ಮಾರ್ಕೆಟಿಂಗ್ ವ್ಯವಹಾರ ಹಾಗೂ ಮೋಸದ ಬಗ್ಗೆ ಎಚ್ಚರ" ಎಂಬ ವಿಷಯದಲ್ಲಿ ಮತ್ತು ಉಸ್ತಾದ್ ಸುಲೈಮಾನ್ ಫೈಝಿ ಚುಂಗತ್ತರ "ಓಸ್ಫೋಜನ ಕರ್ಮ ಪದ್ಧತಿ ವಿವರಣೆ" ಎಂಬ ವಿಷಯದಲ್ಲಿ ವಿಷಯ ಮಂಡನೆ ನಡೆಸಿದರು.
ಸಮಸ್ತ ಶಿಕ್ಷಣ ಮಂಡಳಿ ಸದಸ್ಯರಾಗಿ ಆಯ್ಕೆಯಾದ ರಾಜ್ಯ ಫೈಝೀಸ್ ಉಪಾಧ್ಯಕ್ಷರಾದ ಶರೀಫ್ ಫೈಝಿ ಕಡಬ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಫೆಬ್ರವರಿಯಲ್ಲಿ ಜಿಲ್ಲಾ ಫೈಝೀಸ್ ವತಿಯಿಂದ ನಡೆಯುವ ಕುರ್ಚಿ ನಮಾಝ್ ಬಗ್ಗೆ ಅಧ್ಯಯನ ಶಿಬಿರದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಅಗಲಿದ ಪ್ರಮುಖ ಸೂಫಿವರ್ಯರಾದ ಶೈಖುನಾ ಮೂರಿಯಾಡ್ ಉಸ್ತಾದ್ ರವರ ಹೆಸರಿನಲ್ಲೀ ತಹ್ಲೀಲ್ ಸಮರ್ಪಣೆ ಹಾಗು ದುಆ ಮಜ್ಲಿಸ್ ನಡೆಯಿತು.
ರಾಜ್ಯ ಫೈಝೀಸ್ ಕೋಶಾಧಿಕಾರಿ ಸುಲೈಮಾನ್ ಫೈಝಿ ಕನ್ಯಾನ ರವರ ನೈತೃತ್ವದಲ್ಲಿ ಬಂದರ್ ಮೌಲ ಮಖಾಂ ಝಿಯಾರತ್ ನಡೆಯಿತು. ಸಂಗಮದಲ್ಲಿ ದಕ್ಷಿಣ ಕನ್ನಡ , ಕೊಡಗು, ಉಡುಪಿ, ಹಾಸನ , ಚಿಕ್ಕಮಗಳೂರು, ಉತ್ತರಕನ್ನಡ ಜಿಲ್ಲೆಯ ಪ್ರತಿನಿಧಿಗಳು ಭಾಗವಹಿಸಿದ್ದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಕೊಡಗು ಸ್ವಾಗತಿಸಿ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಫೈಝಿ ಕರಾಯ ವಂದಿಸಿದರು.