ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂನ ಫರಂಗಿಪೇಟೆ ಸಮಿತಿ ಅಸ್ತಿತ್ವಕ್ಕೆ
Update: 2021-01-31 17:44 IST
ಫರಂಗಿಪೇಟೆ, ಜ.31: ರೋಗಿಗಳಿಗೆ ಮತ್ತು ತುರ್ತು ಸಂದರ್ಭಗಳಲ್ಲಿನ ರಕ್ತದ ಬೇಡಿಕೆಗಳನ್ನು ಈಡೇರಿಸಲು ಗ್ರಾಮ ಮಟ್ಟದಲ್ಲಿ ಸಂಘಟಿತ ಸೇವೆ ನೀಡುವ ಉದ್ದೇಶದಿಂದ ಸ್ಥಾಪಿತವಾದ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಇದರ ಫರಂಗಿಪೇಟೆ ಘಟಕ ಅಸ್ತಿತ್ವಕ್ಕೆ ಬಂದಿದೆ.
ಘಟಕದ ಅಧ್ಯಕ್ಷರಾಗಿ ರವೂಫ್ ಪೇರಿಮಾರ್, ಉಪಾಧ್ಯಕ್ಷರಾಗಿ ಮರ್ಝೂಕ್ ಕುಂಪನಮಜಲು, ಕಾರ್ಯದರ್ಶಿಯಾಗಿ ಅಶ್ರಫ್ ಸುಜೀರ್, ಜೊತೆ ಕಾರ್ಯದರ್ಶಿಯಾಗಿ ಇರ್ಫಾನ್ ಹತ್ತನೇ ಮೈಲ್‌ಕಲ್ಲು, ಕೋಶಾಧಿಕಾರಿಯಾಗಿ ಶರೀಫ್ ಕುಂಪನಮಜಲು, ಸದಸ್ಯರಾಗಿ ನಝೀರ್ ಹತ್ತನೇ ಮೈಲ್‌ಕಲ್ಲು, ಸುಲೈಮಾನ್ ಉಸ್ತಾದ್, ಬಶೀರ್ ಅಮೆಮ್ಮಾರ್, ಇಕ್ಬಾಲ್ ಅಮೆಮ್ಮಾರ್, ಸಿರಾಜ್ ಕುಂಪನಮಜಲು, ಅನ್ಸಾರ್ ಅಮೆಮ್ಮಾರ್, ಅಶ್ಫಾಕ್ ಅಮೆಮ್ಮಾರ್ ಹಾಗೂ ರಮ್ಲಾನ್ ಸುಜೀರ್ ಆಯ್ಕೆಯಾದರು ಎಂದು ಪ್ರಕಟನೆ ತಿಳಿಸಿದೆ.