ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ನೀಡಿ: ಕೊಟ್ರೆಸ್
ಉಡುಪಿ, ಜ.31: ಶತಮಾನ ಕಳೆದರೂ ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಈವರೆಗೆ ಮಹಿಳೆಯರಿಗೆ ಅವಕಾಶ ಸಿಗಲಿಲ್ಲ. ಇದು ಬೇಸರ ವಿಷಯ ವಾಗಿದೆ. ಮುಂದೆಯಾದರು ಮಹಿಳೆಯರಿಗೆ ಅಧ್ಯಕ್ಷ ಸ್ಥಾನದಲ್ಲಿ ಅವಕಾಶ ನೀಡ ಬೇಕು ಎಂದು ಬೆಂಗಳೂರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷ ಕೊಟ್ರೆಸ್ ಎಸ್.ಉಪ್ಪಾರ್ ಒತ್ತಾಯಿಸಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಉಡುಪಿ ಜಿಲ್ಲಾ ಮತ್ತು ತಾಲೂಕು ಘಟಕವನ್ನು ರವಿವಾರ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಕೂಡ ಈವರೆಗೆ ಕೇವಲ ಮೂವರು ಮಹಿಳೆಯರಿಗೆ ಮಾತ್ರ ದೊರೆತಿದೆ. ರಾಜ್ಯದಲ್ಲಿ ಪುರುಷರಿಗಿಂತ ಹೆಚ್ಚು ಹಿರಿಯ ಮಹಿಳಾ ಸಾಹಿತಿಗಳೇ ಇದ್ದಾರೆ. ಆದರೆ ಮಹಿಳೆಯರಿಗೆ ಅವಕಾಶ ಕೊಡಬೇಕು ಎಂಬ ಮನಸ್ಸು ಕೇಂದ್ರ ಸಾಹಿತ್ಯ ಪರಿಷತ್ತಿಗೆ ಬಂದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ, ಲೇಖಕಿ ವೈದೇಹಿ ವಹಿಸಿದ್ದರು. ಸಾಹಿತಿ ವಾಸಂತಿ ಅಂಬಲಪಾಡಿ ಬರೆದ ‘ನನ್ನಮ್ಮ ನಿನ್ನಮ್ಮ ನಂತಲ್ಲ’ ಕವನ ಸಂಕಲನ ವನ್ನು ರಾಜ್ಯ ಸಂಚಾಲಕ ರಾಮಕೃಷ್ಣ ಶಿರೂರ್ ಬಿಡುಗಡೆಗೊಳಿಸಿದರು. ರಾಜ್ಯ ಸಂಘಟನ ಕಾರ್ಯದರ್ಶಿ ಸಮುದ್ರವಳ್ಳಿ ವಾಸು ನೂತನ ಅ್ಯಕ್ಷರಿಗೆ ಪದಪ್ರದಾನ ಮಾಡಿದರು.
ತಂತ್ರಜ್ಞ ನಾಡೋಜ ಕೆ.ಪಿ.ರಾವ್, ಹಾಸನದ ಎಂ.ಶಿವಣ್ಣ ಆಲೂರು, ಬಾಗಲಕೋಟೆಯ ಮಹೇಶ ಕುಮಾರ್ ಬಿ.ಕೆ.ಶೆಟ್ಟಿ, ಕಾಸರಗೋಡಿನ ಸುಶೀಲ ಕೆ.ಪದ್ಯಾಣ, ತುಮಕೂರಿನ ಕೆ.ಬಿ.ಚಂದ್ರಪ್ಪ, ದಕ್ಷಿಣ ಕನ್ನಡದ ಬಿ.ಸತ್ಯವತಿ ಭಟ್, ಉಡುಪಿಯ ಸುರಭಿ ಸುಧೀರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ತಾಲೂಕ್ ಅಧ್ಯಕ್ಷೆ ಅಮೃತಾ ಸಂದೀಪ್, ಜಿಲ್ಲಾಧ್ಯಕ್ಷೆ ವಾಸಂತಿ ಅಂಬಲ ಪಾಡಿ ಉಪಸ್ಥಿತರಿದ್ದರು. ವೇದಿಕೆಯ ಜಿಲ್ಲಾ ಉಸ್ತುವಾರಿ ಎಚ್.ಎಸ್. ಬಸವ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿತಾ ಸಿಕ್ವೇರಾ ಸ್ವಾಗತಿಸಿದರು. ಅಶೋಕ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಕ್ಷಿತಾ ಪೂಜಾರಿ ವಂದಿಸಿದರು.