×
Ad

'ವೀರ - ವಿಕ್ರಮ' ಜೋಡುಕರೆ ಬಯಲು ಕಂಬಳದ ಫಲಿತಾಂಶ

Update: 2021-01-31 19:46 IST

ಬಂಟ್ವಾಳ, ಜ.31: ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲೆಯ ಹತ್ತು ಕಂಬಳ ಕೂಟದ ಪ್ರಥಮ ಕಂಬಳ ಕೂಟ ಇಲ್ಲಿನ ಸಿದ್ಧಕಟ್ಟೆ ಸಮೀಪದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿಯಲ್ಲಿ ಶನಿವಾರ ಆರಂಭಗೊಂಡ ವೀರ - ವಿಕ್ರಮ ಜೋಡುಕರೆ ಬಯಲು ಕಂಬಳ ರವಿವಾರ ಬೆಳಗ್ಗೆ ಸಮಾರೋಪಗೊಂಡಿತು. 

ಈ ಕಂಬಳ ಕೂಟದಲ್ಲಿ ಕನೆಹಲಗೆ: 4 ಜೊತೆ, ಅಡ್ಡಹಲಗೆ: 7 ಜೊತೆ, ಹಗ್ಗ ಹಿರಿಯ: 15 ಜೊತೆ. ನೇಗಿಲು ಹಿರಿಯ: 26 ಜೊತೆ, ಹಗ್ಗ ಕಿರಿಯ: 18 ಜೊತೆ, ನೇಗಿಲು ಕಿರಿಯ: 97 ಜೊತೆ ಹೀಗೆ ಒಟ್ಟು 167 ಜೋಡಿ ಓಟದ ಕೋಣಗಳು ಭಾಗವಹಿಸಿದ್ದವು. 

ಕನೆಹಲಗೆ: ವಾಮಂಜೂರು ತಿರುವೈಲುಗುತ್ತು ಅಭಯ್ ನವೀನ್ಚಂದ್ರ ಆಳ್ವ. ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ ಇವರು 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ. ಬೇಲಾಡಿ ಬಾವ ಅಶೋಕ್ ಶೆಟ್ಟಿ. ಹಲಗೆ ಮುಟ್ಟಿದವರು: ನಾರಾವಿ ಯುವರಾಜ್ ಜೈನ್ ಇವರು 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ. 

ಅಡ್ಡ ಹಲಗೆ ಪ್ರಥಮ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್. ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ಕೃಷ್ಣ ನಾಯ್ಕ್. ದ್ವಿತೀಯ: ಆಲದಪದವು ಮೇಗಿನ ಮನೆ ಸುಭ್ರತ್ ಶೆಟ್ಟಿ. ಹಲಗೆ ಮುಟ್ಟಿದವರು: ಬಂಗಾಡಿ ಕುದ್ಮನ್ ಲೋಕಯ್ಯ ಗೌಡ್ರು.

ಹಗ್ಗ ಹಿರಿಯ ಪ್ರಥಮ: ರಾಯಿ ಶೀತಾಲ ಅಗರಿ ರೂಪ ರಾಜೇಶ್ ಶೆಟ್ಟಿ. ಓಡಿಸಿದವರು: ಬೈಂದೂರು ವಿವೇಕ್. ದ್ವಿತೀಯ: ಕೂಳೂರು ಪೊಯ್ಯೆಲು ಪಿ.ಆರ್. ಶೆಟ್ಟಿ. ಓಡಿಸಿದವರು: ಬಾರಾಡಿ ಸತೀಶ್. 

ಹಗ್ಗ ಕಿರಿಯ ಪ್ರಥಮ: ಚೊಕ್ಕಾಡಿ ಕಟಪಾಡಿ ದೇವಿಕ್ ಸಂತೋಷ್ ಶೆಟ್ಟಿ. ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ. ದ್ವಿತೀಯ: ಸಿದ್ಧಕಟ್ಟೆ ಹೊಂಗಾರಹಿತ್ಲು ಮೋಕ್ಷಿತ್ ಕಾಂತಣ್ಣ ಶೆಟ್ಟಿ. ಓಡಿಸಿದವರು: ವಾಲ್ಪಾಡಿ ಶಂಕರ್. 

ನೇಗಿಲು ಹಿರಿಯ ಪ್ರಥಮ: ಇರುವೈಲು ಪಾನಿಲ ಬಾಡ ಪೂಜಾರಿ. ಓಡಿಸಿದವರು: ಬೈಂದೂರು ವಿವೇಕ್. ದ್ವಿತೀಯ: ಕೌಡೂರು ಬೀಡು ತುಷಾರ್ ಮಾರಪ್ಪ ಭಂಡಾರಿ. ಓಡಿಸಿದವರು: ಬಾರಾಡಿ ಸತೀಶ್

ನೇಗಿಲು ಕಿರಿಯ ಪ್ರಥಮ: ಕಾಂತಾವರ ಬಾಂದೊಟ್ಟು ನಿಖಿಲ್ ಮೋಕ್ಷಿತ್ ಕುಮಾರ್. ಓಡಿಸಿದವರು: ಮರೋಡಿ ಶೀಧರ್. ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ. ಓಡಿಸಿದವರು: ಅತ್ತೂರು ಕೊಡಂಗೆ ಸುಧೀರ್ ಸಾಲ್ಯಾನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News