×
Ad

ಪೊಲೀಯೊ: ಉಡುಪಿ ಜಿಲ್ಲೆಯಲ್ಲಿ ಶೇ.99.44 ಸಾಧನೆ

Update: 2021-01-31 20:50 IST

ಉಡುಪಿ, ಜ.31: ಉಡುಪಿ ಜಿಲ್ಲೆಯಲ್ಲಿ 0-5ವರ್ಷದೊಳಗಿನ ಒಟ್ಟು 74,049 ಮಕ್ಕಳ ಪೈಕಿ 73,636 ಮಕ್ಕಳಿಗೆ ಇಂದು ಪೊಲಿಯೋ ಲಸಿಕೆ ನೀಡುವ ಮೂಲಕ ಶೇ.99.44 ಸಾಧನೆ ಮಾಡಲಾಗಿದೆ.

ಉಡುಪಿ ತಾಲೂಕಿನ 33,316 ಮಕ್ಕಳಲ್ಲಿ 33,414(ಶೇ.100.29), ಕುಂದಾಪುರ ತಾಲೂಕಿನ 27,413 ಮಕ್ಕಳ ಪೈಕಿ 27,019(ಶೇ.98.56) ಮತ್ತು ಕಾರ್ಕಳ ತಾಲೂಕಿನ 13,320 ಮಕ್ಕಳಲ್ಲಿ 13,203(ಶೇ.99.44) ಮಕ್ಕಳು ಪೊಲಿಯೋ ಲಸಿಕೆ ಪಡೆದುಕೊಂಡಿದ್ದಾರೆಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News