×
Ad

ಎಸ್ಕೆಎಸ್ಸೆಸ್ಸೆಫ್ ಮಿತ್ತಬೈಲ್ ಕ್ಲಸ್ಟರ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

Update: 2021-01-31 21:53 IST

ಮಂಗಳೂರು: ಎಸ್ಕೆಎಸ್ಸೆಸ್ಸೆಫ್ ವಿಖಾಯ ರಕ್ತದಾನಿ ಬಳಗ ದ.ಕ ವಿಖಾಯ ಮತ್ತು ರಕ್ತದಾನಿ ಬಳಗ ಬಂಟ್ವಾಳ ವಲಯ ,ಮತ್ತು ಮಿತ್ತಬೈಲ್ ಕ್ಲಸ್ಟರ್ ವತಿಯಿಂದ ಹಾಗೂ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಇದರ ಸಹಬಾಗಿತ್ವದಲ್ಲಿ ರಕ್ತದಾನ ಶಿಬಿರವು ನಕ್ಷಬಂದಿ ನಗರ ಮಿತ್ತಬೈಲ್ ಉಸ್ತಾದರ ಮನೆಯಲ್ಲಿ ನಡೆಯಿತು.

ಅಶ್ರಫ್ ಶಾಂತಿಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷರಾದ ಇರ್ಷಾದ್ ದಾರಿಮಿ ಅಲ್ ಜಝ್ಹರಿ ದುಃವಾ ನೆರೆವೇರಿಸಿದರು. ಶಾಕೀರ್ ಮಿತ್ತಬೈಲ್ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಮಿತ್ತಬೈಲ್ ಖತೀಬರಾದ ಅಶ್ರಫ್ ಫೈಝಿ, ಎಸ್ಕೆಎಸ್ಸೆಸ್ಸೆಫ್ ವಿಖಾಯ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಶೀರ್ ಮಜಲ್, ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ ಜಿಲ್ಲಾ ಅಧ್ಯಕ್ಷ ಸೈಯ್ಯಿದ್ ಇಸ್ಮಾಯಿಲ್ ತಂಙಳ್, ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ ಜಿಲ್ಲಾ  ಕೋ ಆರ್ಡಿನೇಟರ್ ಮುಸ್ತಫ ಕಟ್ಟದಪಡ್ಪು, ಅಬ್ಬಾಸ್ ಅಲಿ, ಪುರಸಭಾಧ್ಯಕ್ಷರಾದ ಶರೀಫ್ ಶಾಂತಿ ಅಂಗಡಿ ವಲಯ ಸಹಚಾರಿ ಕನ್ವೀನರ್ ನಾಸೀರ್ ಜಿ.ಕೆ. ಮಂಗಳೂರು ವಲಯ ಉಸ್ತುವಾರಿ ನಝೀರ್ ವಲಚ್ಚಿಲ್, ಬಂಟ್ವಾಳ ವಿಖಾಯ ಕನ್ವಿನರ್ ಖಾಲಿದ್ ಕಲ್ಲಗುಡ್ಡೆ, ಕ್ಲಸ್ಟರ್ ವಿಖಾಯ ಕನ್ವಿನರ್ ಶಾಫಿ ಜಿ.ಕೆ, ಕ್ಲಸ್ಟರ್ ವ್ಯಾಪ್ತಿಯ ಶಾಖೆಯ ಅಧ್ಯಕ್ಷರು ಉಪಸ್ಥಿತರಿದ್ದರು.

ಖಲಂದರ್ ತುಂಬೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News