ಕಾರ್ಕಳ: ಕರ್ನಾಟಕ ಮುಸ್ಲಿಂ ಜಮಾಅತ್ ಗ್ರಾಮ ಸಮಿತಿ ಅಸ್ತಿತ್ವಕ್ಕೆ
ಕಾರ್ಕಳ, ಫೆ.1: ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಬಜಗೋಳಿ, ನೆಲ್ಲಿಕಾರು, ಹೊಸ್ಮಾರು ವ್ಯಾಪ್ತಿಯ ಗ್ರಾಮ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಇದರ ನೂತನ ಅಧ್ಯಕ್ಷರಾಗಿ ಅಬೂಬಕರ್ ಸಿದ್ದೀಕ್ ಗುಂಪಕಲ್ಲು ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಎನ್.ಮಯ್ಯದ್ದಿ ನೆಲ್ಲಿಕಾರು, ಕೋಶಾಧಿಕಾರಿಯಾಗಿ ನಝೀರ್ ಸಾಹೆಬ್, ಉಪಾಧ್ಯಕ್ಷರಾಗಿ ಅಬ್ದುಲ್ ಗನೀ ಸಾಹೆಬ್, ವಿ.ಎ.ಸುಲೈಮಾನ್ ಹಾಜಿ ಬಜಗೋಳಿ, ಸಮದ್ ಬೊಳ್ಳೊಟ್ಟು, ಕಾರ್ಯದರ್ಶಿಗಳಾಗಿ ಹಫೀಝ್ ವರಿಮಾರು, ಇಮ್ತಿಯಾಝ್ ನೆಲ್ಲಿಕಾರು, ಉಸ್ಮಾನ್ ಬಜಗೋಳಿ, ಸಂಘಟನಾ ಕಾರ್ಯದರ್ಶಿಯಾಗಿ ಸೈಯದ್ ಹಾರಿಸ್ ಹೊಸ್ಮಾರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಾವಿದ್ ಪೇರಲ್ಕೆ, ಝಾಕಿರ್ ಮಡ್ಡಿಬೆಟ್ಟು, ಶಾಹಿದ್ ವರಿಮಾರು, ಅಯಾಝ್ ವರಿಮಾರು, ಕಲೀಂ ಟಿ.ಎಸ್., ಅಬ್ದುಲ್ ಸತ್ತಾರ್ ಕುರಿಯಾರು, ಎನ್.ಸಿ.ಅಹ್ಮದ್, ಎಂ.ಎಚ್.ಸುಲೈಮಾನ್ ಸಅದಿ ಅಲ್ ಅಫ್ಳಲಿ, ಮುಹಮ್ಮದ್ ಶರೀಫ್ ಮದನಿ ಹೊಸ್ಮಾರು, ಎಚ್.ಅಬ್ದುರ್ರಹ್ಮಾನ್ ಮುಸ್ಲಿಯಾರ್, ಅಝೀಝ್ ಹೊಸ್ಮಾರು, ಹನೀಫ್ ಡೊಂಕೊಟ್ಟು ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.