ಕಾರ್ಕಳ: ಆನೆಕೆರೆ ಕಾಲುವೆಗೆ ಉರುಳಿದ ವಿದ್ಯಾರ್ಥಿ ಚಲಾಯಿಸುತ್ತಿದ್ದ ಕಾರು
Update: 2021-02-01 10:55 IST
ಕಾರ್ಕಳ, ಫೆ.1: ವಿದ್ಯಾರ್ಥಿ ಚಲಾಯಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆನೆಕೆರೆ ಕಾಲುವೆಗೆ ಉರುಳಿ ಬಿದ್ದ ಘಟನೆ ರವಿವಾರ ತಡರಾತ್ತಿ ನಡೆದಿದೆ.
ವಿದ್ಯಾರ್ಥಿಯೊಬ್ಬನಿಗೆ ಸೇರಿದ್ದೆನ್ನಲಾದ ಕೇರಳ ನೋಂದಣಿಯ ಈ ಕಾರು ರವಿವಾರ ಕಾರ್ಕಳದ ಹೊಟೇಲ್ ವೊಂದರ ಮುಂಭಾಗದಲ್ಲಿತ್ತೆನ್ನಲಾಗಿದೆ. ತಡರಾತ್ರಿ ಅಲ್ಲಿಂದ ಹೊರಟು ಹೋದ ಈ ಕಾರು ಕೆಲವೇ ಹೊತ್ತಿನಲ್ಲಿ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ.
ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಕಾರು ಕಾಲುವೆಗೆ ಉರುಳಿಬಿದ್ದಿದೆಯೆನ್ನಲಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದವರು ಜೀವಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಕಾರ್ಕಳ ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.