ಹುತಾತ್ಮ ಯೋಧನ ಪತ್ನಿಗೆ ವಂಚನೆ ಆರೋಪ ಪ್ರಕರಣ: ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸದನದಲ್ಲಿ ಪ್ರಸ್ತಾಪ

Update: 2021-02-01 11:59 GMT

ಮಂಗಳೂರು, ಫೆ.1: ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್‌ಪಿಎಫ್)ನಲ್ಲಿ ಸೇವೆ ಸಲ್ಲಿಸುತ್ತಿದ್ದ ಹುತಾತ್ಮ ಯೋಧ ಉದಯ ಕುಮಾರ್ ಎಂಬವರ ಪತ್ನಿಗೆ ರೇಖಿಗುರು ಚಿಕಿತ್ಸೆ ಹೆಸರಿನಲ್ಲಿ ವಂಚಿಸಿ ಮೋಸ ಮಾಡಿರುವ ಆರೋಪ ಪ್ರಕರಣವನ್ನು ವಿಧಾನ ಮಂಡಲದ ಅಧಿವೇಶನದಲ್ಲಿ ವೇಳೆ ಸದಸ್ಯ ಹರೀಶ್ ಕುಮಾರ್ ಪ್ರಸ್ತಾಪಿಸಿದ್ದಾರೆ.

ಈ ಸಂದರ್ಭ ಸಭಾ ನಾಯಕ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ಅವರು ಪ್ರತಿಕ್ರಿಯಿಸಿ, ಈ ಬಗ್ಗೆ ಗೃಹ ಸಚಿವರಿಂದ ಕ್ರಮ ಕೈಗೊಂಡು ಉತ್ತರ ನೀಡುವ ಭರವಸೆಯನ್ನು ನೀಡಿದ್ದಾರೆ.

ಬೀಡಿ ಉದ್ದಿಮೆಗೆ ಕನಿಷ್ಟ ವೇತನ ಕಾಯ್ದೆ ಅನ್ವಯವಾಗುತ್ತಿದ್ದು, 2017ರ ಜೂನ್ 17ರಂದು ರಚಿಸಲಾದ ಸಮಿತಿಯ ಸರ್ವ ಸದಸ್ಯರ ಸಹಮತದೊಂದಿಗೆ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಿ 2018ರ ಮಾರ್ಚ್ 14ರಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅಧಿಸೂಚನೆಯ ದರಗಳ್ನನು ಅನುಷ್ಠಾನಗೊಳಿಸುವಂತೆ ಇಲಾಖೆಯ ಎಲ್ಲಾ ಕ್ಷೇತ್ರಾಧಿಕಾರಿಗಳಿಗೆ ಆದೇಶವನ್ನೂ ಜಾರಿಗೊಳಿಸಲಾಗಿತ್ತು. ಆದರೆ ಈ ಬಗ್ಗೆ ಮಂಗಳೂರು ಬೀಡಿ ಕಂಪನಿಯೊಂದು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಸಿದ್ದು, ಪ್ರಕರಣ ನ್ಯಾಯಾಲದಲ್ಲಿರುವದರಿಂದ 2018ರ ಮಾರ್ಚ್ 14ರ ಅಧಿಸೂಚನೆಯ ಕನಿಷ್ಠ ವೇತನ ದರಗಲನ್ನು ಅನುಷ್ಠಾನಗೊಳಿಸುವುದು ಸಾಧ್ಯವಾಗಿರುವುದಿಲ್ಲ ಎಂದು ಅಧಿವೇಶನದಲ್ಲಿ ಕಾರ್ಮಿಕ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.

ಇದಲ್ಲದೆ, ದ.ಕ. ಜಿಲ್ಲೆಯಲ್ಲಿ ಬೀಡಿ ಕಾರ್ಮಿಕ ಕಂಪನಿಗಳು ಕಾರ್ಮಿಕರಿಗೆ ಸಿಗಬೇಕಾದ ಗ್ರಾಚ್ಯುಟಿ ಹಾಗೂ ಇತರ ಮೊತ್ತವನ್ನು ಸಂದಾಯ ಮಾಡದೆ ಇರುವ ಸಂಸ್ಥೆಗಳು ಕಾರ್ಖಾನೆಗಳ ವಿರುದ್ಧ ಕಾರ್ಮಿಕ ಇಲಾಖೆಯಿಂದ ಉಪಧನ ಪಾವತಿ ಕಾಯ್ದೆಯಡಿ 280 ಅರ್ಜಿಗಳನ್ನು ದಾಖಲಿಸಿರುತ್ತದೆ. ಕನಿಷ್ಟ ವೇತನ ಪಾವತಿಕಾಯ್ದೆಯಂದೆ ಒಟ್ಟು 2,337ಕಾರ್ಮಿಕರಿಗೆ ಸಂಬಂಧಿಸಿದಂತೆ 1,67,05,894.27 ರೂ. ಮೊತ್ತದ 94 ಕ್ಲೇಮ್ ಅರ್ಜಿಗಳನ್ನು ಸಕ್ಷಮ ಅಧಿಕಾರಿಗಳ ಮುಂದೆ ದಾಖಲಿಸಿರುತ್ತದೆ. ವೇತನ ಪಾವತಿ ಕಾಯ್ದೆಯಡಿ 638 ಕಾರ್ಮಿಕರಿಗೆ 61,61,594 ರೂ. ಮೊತ್ತದ 11 ಕ್ಲೇಮ್ ಅರ್ಜಿಗಳನ್ನು ದಾಖಲಿಸಿರುವುದಾಗಿ ಕಾರ್ಮಿಕ ಸಚಿವರು ಹರೀಶ್ ಕುಮಾರ್ ಅವರು ಎತ್ತಿರುವ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದ್ದಾರೆ.

ಹರೀಶ್ ಕುಮಾರ್ ಅವರು ದ.ಕ. ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಬೀಡಿ ಕಾರ್ಮಿಕರಿದ್ದು, ಅವರಿಗೆ ನಿಗದಿಪಡಿಸಿದ ಕನಿಷ್ಠ ಕೂಲಿಯನ್ನು ನೀಡಲಾಗುತ್ತಿದೆಯೇ? ಕಾನೂನು ರೀತಿಯಲ್ಲಿ ಸಿಗಬೇಕಾದ ಗ್ರಾಚ್ಯುಟಿ ಮತ್ತು ಇತರೆ ಮೊತ್ತವನ್ನು ಸಂದಾಯ ಮಾಡದೆ ವಿಲಂಭ ಧೋರಣೆ ಅನುಸರಿಸುತ್ತಿರುವ ಬಗ್ಗೆ ಸರಕಾರ ಗಮನ ಹರಿಸಿದೆಯೇ ಎಂದು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News