×
Ad

ರೈತರೆಡೆ ಸರಣಿ ಕಾರ್ಯಕ್ರಮದಲ್ಲಿ ಸಂಜೀವ ಪೂಜಾರಿಗೆ ಸನ್ಮಾನ

Update: 2021-02-01 18:24 IST

ಕೋಟ, ಫೆ.1: ಕೋಟ ಪಂಚವರ್ಣ ಯುವಕ ಮಂಡಲ ಇದರ ಆಶ್ರಯ ದಲ್ಲಿ ಗಿಳಿಯಾರು ಯುವಕ ಮಂಡಲ, ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್, ಸಾಲಿಗ್ರಾಮವಿಪ್ರ ಮಹಿಳಾ ಬಳಗ, ಕೋಟ ರೈತಧ್ವನಿ ಸಂಘ, ಮಣೂರು ಗೀತಾನಂದ ಫೌಂಡೇಶನ್, ಮಣೂರು ಫ್ರೆಂಡ್ಸ್ಗಳ ಸಹಯೋಗ ದಲ್ಲಿ ಹಮ್ಮಿ ಕೊಳ್ಳಲಾದ 5ನೇ ತಿಂಗಳ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆಯಲ್ಲಿ ಸಾಲಿಗ್ರಾಮದ ಚಿತ್ರಪಾಡಿ ಸಂಜೀವ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ರೈತನನ್ನು ಗುರುತಿಸುವುದೇ ಬಲುಅಪರೂಪ ಅದರಲ್ಲಿ ಪಂಚವರ್ಣದ ಈ ಕಾರ್ಯ ಶ್ಲಾಘನೀಯ ಎಂದು ಕೋಟದ ಉದ್ಯಮಿ ಕೆ.ಉಮೇಶ್ ಪ್ರಭು ಹೇಳಿದ್ದಾರೆ.

ರೈತನ ಕಷ್ಟ ಇನ್ನಾವುದೇ ರಂಗದಲ್ಲಿರುವವರಿಗೆ ತಿಳಿಯದು ಬಿಸಿಲೆನ್ನದೆ ಅತ್ತ ಮಳೆಯನ್ನದೆ,ಚಳಿಯನ್ನದೆ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದರ ಜೊತೆಗೆ ದೇಶದ ಜನತೆಯ ಹೊಟ್ಟೆ ತುಂಬಿಸಲು ಅವಿರತವಾಗಿ ಶ್ರಮಿಸುತ್ತಾನೆ ಈ ದೇಶದಲ್ಲಿ ಸಾವಿರಾರು ಬಗೆಯ ಕೆಲಸಗಳಿರಬಹುದು ಆದರೆ ರೈತ ಪಡುವ ಕಷ್ಟದ ಕೆಲಸ ನಿರ್ವಹಿಸಲು ಯೋಚಿಸುವಂತ್ತಾಗಿದೆ ಇಂದಿನ ಯುವ ಸಮೂಹ ಏಕೆಂದರೆ ಶ್ರಮದ ಬೆವರಿನ ದುಡಿಮೆಗೆ ಇಳಿಯುವುದಿಲ್ಲ ಬದಲಾಗಿ ಸುಖದ ಕಾರ್ಯಗಳನ್ನು ಅರಸುತ್ತಾ ಸಾಗುತ್ತಾನೆ .ಅಂತಹ ರೈತನಿಗೆ ಸರಕಾರದ ದೊಡ್ಡ ಮಟ್ಟದ ಸಹಕಾರ ಅತ್ಯಗತ್ಯ ರೈತ ಬೆಳೆದ ಫಸಲಿಗೆ ಸರಿಯಾದ ಬೆಂಬಲ ಬೆಲೆ ನಿಗದಿಗೊಳಿಸಿದರೆ ರೈತನ ಕಾಯಕಕ್ಕೆ ಅರ್ಥ ಬರುತ್ತದೆ.ಇಂಥಹ ಕಾಲಘಟ್ಟದಲ್ಲಿ ಚಿತ್ರಪಾಡಿಯ ಈ ರೈತ ಇತತರರಿಗೆ ಮಾದರಿಯಾಗಿ ಬದುಕಿದ್ದಾರೆ.ಎಂದು ತಮ್ಮ ಅಭಿಮತ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ ಶೇವಧಿ ವಹಿಸಿದ್ದರು. ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಚೇಂಪಿ ವೆಂಕಟೇಶ ಭಟ್, ವಿಪ್ರ ಮಹಿಳಾ ಬಳಗದ ಸಂಘಟಕಿ ವನೀತಾ ಉಪಾಧ್ಯ, ಗಿಳಿಯಾರು ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಕುಂದರ್ ಗಿಳಿಯಾರ್, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ ಶೇವಧಿ, ಉಪಾಧ್ಯಕ್ಷ ಅಮೃತ್ ಜೋಗಿ ಉಪಸ್ಥಿತರಿದ್ದರು.

ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಕಾರ್ಯದರ್ಶಿ ಅಜಿತ್ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿಪ್ರ ಮಹಿಳಾ ಬಳಗದ ಸಂಚಾಲಕಿ ಸುಜಾತ ಬಾಯಿರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News