ರಂಗಭೂಮಿಯಿಂದ ಮುಂಬೈ ಕನ್ನಡಿಗರಲ್ಲಿ ಏಕತೆ: ಡಾ.ಭರತ್ ಕುಮಾರ್

Update: 2021-02-01 14:56 GMT

ಉಡುಪಿ, ಫೆ.1: ಬಹುಸಂಸ್ಕೃತಿಯ ನೆಲೆಯಾಗಿರುವ ಮುಂಬೈಯಲ್ಲಿ ರಂಗ ಭೂಮಿಯು ಮುಂಬೈ ಕನ್ನಡಿಗರಲ್ಲಿ ಏಕತೆ ಹಾಗೂ ಒಗ್ಗೂಡುವಂತೆ ಮಾಡಿದೆ. ಅಲ್ಲಿನ ನಡೆಯುತ್ತಿದ್ದ ಕನ್ನಡ ಚಟುವಟಿಕೆಗಳು ಅಸ್ಮಿತೆಗೆ ಬಹಳ ಅಗತ್ಯ ಎಂದು ರಂಗ ನಿರ್ದೇಶಕ ಡಾ.ಭರತ್ ಕುಮಾರ್ ಪೊಲಿಪು ಹೇಳಿದ್ದಾರೆ.

ಉಡುಪಿ ರಥಬೀದಿ ಗೆಳೆಯರು ಆಶ್ರಯದಲ್ಲಿ ಸಂಸ್ಥೆಯ ಕಚೇರಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಅವರು ಬಿ.ಆರ್.ನಾಗೇಶ್ ಮತ್ತು ಮುಂಬೈ ರಂಗೂಮಿ ಕುರಿತು ಮಾತನಾಡುತಿದ್ದರು.

ಸಾಂಕೇತಿಕ ರಂಗಭೂಮಿಯನ್ನು ಹುಟ್ಟುಹಾಕಿದ್ದ ರಂಗಕರ್ಮಿ ಬಿ.ಆರ್. ನಾಗೇಶ್, ಅದರ ಸಾಧ್ಯತೆಗಳನ್ನು ವಿಸ್ತರಿಸಿದ್ದರು. ರಂಗದಲ್ಲಿ ಅವರಿಗೆ ಶಿಸ್ತಿಗೆ ಅತ್ಯಂತ ಹೆಚ್ಚು ಆದ್ಯತೆ ನೀಡುತ್ತಿದ್ದರು. ರಂಗ ನಿರ್ದೇಶಕರ ಸೃಜನಶೀಲತೆ ಅರ್ಥ ಆಗಬೇಕಾದರೆ ದಾಖಲೆ ಅಗತ್ಯ. ಆದರೆ ಆ ಕಾಲದಲ್ಲಿ ಯಾವುದೇ ದಾಖ ಲೀಕರಣ ಇರಲಿಲ್ಲ ಎಂದರು.

ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ, ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಉಪಸ್ಥಿತರಿದ್ದರು. ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News