ಮದನೀಸ್ ಪುತ್ತೂರು ತಾಲೂಕು ಸಮಿತಿ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ
ಪುತ್ತೂರು: ಮದನೀಸ್ ಅಸೋಸಿಯೇಷನ್ ಪುತ್ತೂರು ತಾಲೂಕು ಇದರ ಮಹಾಸಭೆಯು ಇತ್ತೀಚಿಗೆ ಪುತ್ತೂರು ಮುಸ್ಲಿಂ ಜಮಾಅತ್ ಕಚೇರಿಯಲ್ಲಿ ನಡೆಯಿತು.
ಮೂಸಾ ಮದನಿ ಇರ್ದೆಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದ ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಮಾಜಿ ಅಧ್ಯಕ್ಷರೂ, ಎಸ್.ಜೆ.ಎಂ ಸಾರಥಿಯೂ ಆದ ಆದಂ ಮದನಿ ಆತೂರು ಅವರು ವಹಿಸಿದ್ದರು.
ಶೆರೀಫ್ ಮದನಿ ಮಾಡನ್ನೂರು ಖಿರಾಅತ್ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಅಬ್ಬಾಸ್ ಮದನಿ ಬಂಡಾಡಿ ಉದ್ಘಾಟಿಸಿದರು. ಅಧ್ಯಕ್ಷ ಭಾಷಣದ ಬಳಿಕ ಮುಹಮ್ಮದ್ ಮದನಿ ತಿಂಗಳಾಡಿ, ಫಾರೂಖ್ ಮದನಿ ಸಂಪ್ಯ ಹಾಗೂ ಅಬ್ದುರ್ರಹ್ಮಾನ್ ಮದನಿ ಇರ್ದೆ ಭಾಷಣ ಮಾಡಿದರು. ರಿಟೈನರಿಂಗ್ ಆಫೀಸರುಗಳಾಗಿ ಆಗಮಿಸಿದ ಅಬೂಬಕರ್ ಮದನಿ ಮುದುಂಗಾರುಕಟ್ಟೆ ಹಾಗೂ ಶಾಫಿ ಮದನಿ ಹರೇಕಳ ಸಭೆಗೆ ಶುಭಾಶಯ ಕೋರಿ ಹಿತವಚನ ನೀಡಿದರು.
ಬಳಿಕ ಹಾಲಿ ಸಮಿತಿಯನ್ನು ವಿಸರ್ಜಿಸಿ ಶಾಫಿ ಮದನಿ ಹರೇಕಳ ಅವರ ನೇತೃತ್ವದಲ್ಲಿ ಪುತ್ತೂರು ತಾಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ಅಧ್ಯಕ್ಷರಾಗಿ ಟಿ.ಕೆ.ಇಬ್ರಾಹಿಮ್ ಮದನಿ, ಉಪಾಧ್ಯಕ್ಷರುಗಳಾಗಿ ಫಾರೂಖ್ ಮದನಿ ಸಂಪ್ಯ ಹಾಗೂ ಅಬ್ದುಲ್ ಖಾದರ್ ಮದನಿ ಸುಳ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹೈದರ್ ಮದನಿ ಕೆಮ್ಮಾರ, ಜೊತೆ ಕಾರ್ಯದರ್ಶಿಗಳಾಗಿ ಅಬ್ದುರ್ರಝಾಖ್ ಮದನಿ ಕಬಕ ಹಾಗೂ ಹಮೀದ್ ಮದನಿ ತಿಂಗಳಾಡಿ, ಕೋಶಾಧಿಕಾರಿಯಾಗಿ ಮುಹಮ್ಮದ್ ಮದನಿ ಈಶ್ವರಮಂಗಳ ಆಯ್ಕೆಯಾದರು.
ಜೊತೆಗೆ ಇಪ್ಪತ್ತು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಐದು ಮಂದಿಯನ್ನು ಸಮಿತಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲು ನಿರ್ಧರಿಸಲಾಯಿತು.
ದ.ಕ ಈಸ್ಟ್ ವಿಭಾಗದ ಪ್ರಧಾನ ಕಾರ್ಯದರ್ಶಿ ಶಾಫಿ ಮದನಿ ಮಾಡಾವು ಸ್ವಾಗತಿಸಿ, ಹಾಲಿ ತಾಲೂಕು ಮದನೀಸ್ ಪ್ರಧಾನ ಕಾರ್ಯದರ್ಶಿ ಹೈದರ್ ಮದನಿ ಕೆಮ್ಮಾರ ವಂದಿಸಿದರು.