×
Ad

ತೊಕ್ಕೋಟ್ಟು : ಲೈಫ್ ಮೆಡಿಕಲ್ ಉದ್ಘಾಟನಾ ಅಂಗವಾಗಿ ರಕ್ತದಾನ ಶಿಬಿರ

Update: 2021-02-01 22:35 IST

ತೊಕ್ಕೋಟ್ಟು : ಒಳಪೇಟೆಯ ಅಂಬೇಡ್ಕರ್ ರಂಗಮಂದಿರದ ಎದುರಿನ ಕೃಷ್ಣ ಬಿಲ್ಡಿಂಗ್ ಕಟ್ಟಡದಲ್ಲಿ 'ಲೈಫ್ ಮೆಡಿಕಲ್' ಉದ್ಘಾಟನಾ ಸಮಾರಂಭದ ಅಂಗವಾಗಿ ಬ್ಲಡ್ ಹೆಲ್ಪ್ ಕೇರ್ ಆಯೋಜಿಸಿದ ರಕ್ತದಾನ ಶಿಬಿರವನ್ನು ಶಾಸಕ ಯು.ಟಿ.ಖಾದರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ತೊಕ್ಕೋಟ್ಟು ಪ್ರದೇಶದಲ್ಲಿ ಜನರ ಆರೋಗ್ಯ ಸಂಬಂಧಪಟ್ಟ ಹಾಗೆ ತಮ್ಮ ವ್ಯಾಪಾರವನ್ನು ಪ್ರಾರಂಭ ಮಾಡಿ, ಪ್ರಮಾಣಿಕ ಸೇವೆಯ ಮೂಲಕ ಇನ್ನಿತರ ಬ್ರಾಂಚ್ ಗಳನ್ನು ಹೊಂದುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹೇಳಿದರು.

ಲೈಫ್ ಮೆಡಿಕಲ್ ಇದರ ಉದ್ಘಾಟನೆಯ ಅಂಗವಾಗಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಮತ್ತು ತೊಕ್ಕೋಟ್ಟು ಒಳಪೇಟೆಯ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಸಂಯುಕ್ತ ಆಶ್ರಯದಲ್ಲಿ ದೇರಳೆಕಟ್ಟೆ ಯೇನಪೋಯ ಮೆಡಿಕಲ್ ಕಾಲೇಜು ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಉಳ್ಳಾಲ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಮಾತನಾಡಿದರು.ಪಾಂಡೇಶ್ವರ ಪೋಲೀಸ್ ಠಾಣೆಯ ವೃತ್ತ ನಿರೀಕ್ಷಕ ಲೋಕೇಶ್ ಅವರು  ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.

ರಕ್ತದಾನ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ಅಧ್ಯಕ್ಷ ನಝೀರ್ ಹುಸೈನ್ ಇಂದಿನ ಉಚಿತ ರಕ್ತದಾನ ಶಿಬಿರವನ್ನು ನಡೆಸಲು ಅವಕಾಶ ಮಾಡಿ ಕೊಟ್ಟಂತಹ ಲೈಫ್ ಮೆಡಿಕಲ್ ಸಂಸ್ಥೆಯವರಿಗೆ ಅಭಿನಂದನೆಗಳು, ಹಾಗೂ ಇದಕ್ಕೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ವಂದಿಸಿದರು.

ಇದೇ ಸಂದರ್ಭದಲ್ಲಿ ಎನ್.ಬಿ.ಎಂ ಗ್ರೂಪಿನ ಸ್ಥಾಪಕ ಮನ್ಸೂರ್ ಅಹ್ಮದ್ ಅವರನ್ನು ಸನ್ಮಾನಿಸಲಾಯಿತು. ರಕ್ತದಾನ ಶಿಬಿರವನ್ನು ಆಯೋಜಿಸಿದ ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಗೆ ಯೇನಪೋಯ ಮೆಡಿಕಲ್ ಕಾಲೇಜಿನ ವತಿಯಿಂದ ಪ್ರಶಂಶನಾ ಪತ್ರ ನೀಡಲಾಯಿತು.

ಉಳ್ಳಾಲ ನಗರ ಸಭಾ ಅಧ್ಯಕ್ಷ  ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಶರೀಫ್, ನಗರ ಸಭೆ ಸದಸ್ಯರಾದ ಅಝೀಝ್, ಎ.ಐ.ಎಂ.ಡಿ.ಎಫ್ ಅಧ್ಯಕ್ಷ ಮೊಹಮ್ಮದ್ ಆಶೀಫ್ ಚೊಕ್ಕಬೆಟ್ಟು ಹಾಗೂ ಹಾರೀಶ್ ಪರ್ತಿಪ್ಪಾಡಿ. ಮಸ್ಕತ್, ಕೆ.ಸಿ.ರೋಡ್ ನ್ಯಾಶನಲ್ ಮೆಡಿಕಲ್ ಇದರ ನಿರ್ದೇಶಕರಾದ ನಾಸೀರ್ ಅಹ್ಮದ್, ಪಾಡೇಶ್ವರ ಎಸ್.ಎಂ ಮೆಡಿಕಲ್ ಇದರ ನಿರ್ದೇಶಕರಾದ ಮುಬೀನ್, ಉಳ್ಳಾಲ ಟೌನ್ ಮೆಡಿಕಲ್ ಇದರ ನಿರ್ದೇಶಕರಾದ ಮನ್ಸೂರ್ ಅಹ್ಮದ್, ಮಾಸ್ತಿಕಟ್ಟೆ ಟೌನ್ ಮೆಡಿಕಲ್ ಇದರ ನಿರ್ದೇಶಕರಾದ ಮುಹಾಝ್, ಪಂಜಿಮೊಗರು ಮಾಸ್ಟರ್ ಮೆಡಿಕಲ್ ಇದರ ನಿರ್ದೇಶಕರಾದ ನಿಸಾರ್, ಕುಂಪಲ ಮಾಸ್ಟರ್ ಮೆಡಿಕಲ್ ಇದರ ನಿರ್ದೇಶಕರಾದ ನಿಹಾಲ್, ಚೊಕ್ಕಬೆಟ್ಟು ಲೈಫ್ ಕೇರ್ ಮೆಡಿಕಲ್ ಇದರ ನಿರ್ದೇಶಕರಾದ ಮುಝಮ್ಮಿಲ್, ಸುರತ್ಕಲ್ ಲೈಫ್ ಕೇರ್ ಮೆಡಿಕಲ್ ಇದರ ನಿರ್ದೇಶಕರಾದ ಅಶ್ರಫ್, ಜೋಕಟ್ಟೆ ಲೈಫ್ ಕೇರ್ ಮೆಡಿಕಲ್ ಇದರ ನಿರ್ದೇಶಕರಾದ ರಮೀಝ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ  ಇದರ ಶಿಬಿರದ ಉಸ್ತುವಾರಿ ಮುಸ್ತಫ ಕೆ.ಸಿ.ರೋಡ್, ಶಿಬಿರದ ಮೇಲ್ವಿಚಾರಕ ಇಂತಿಯಾಝ್ ಬಜ್ಪೆ, ಜೊತೆ ಕಾರ್ಯದರ್ಶಿ ಬಶೀರ್ ಮಂಗಳೂರು, ಕಾರ್ಯ ನಿರ್ವಾಹಕರಾದ ಮುಝಮ್ಮಿಲ್ ಕೃಷ್ನಾಪುರ, ಎ.ಕೆ.ನಶೀಲ್, ಅಲ್ಮಾಝ್ ಉಳ್ಳಾಲ್, ಗೌರವಾಧ್ಯಕ್ಷರಾದ ಇಫ್ತಿಕಾರ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಸಫ್ವಾನ್ ಕಲಾಯಿ ಪ್ರಾಸ್ತವಿಕವಾಗಿ ಮಾತನಾಡಿದರು, ಕೋಶಾಧಿಕಾರಿ ಸತ್ತಾರ್ ಪುತ್ತೂರು ಸ್ವಾಗತಿಸಿದರು, ಕಾರ್ಯನಿರ್ವಾಹಕ ಅಬ್ದುಲ್ ಹಮೀದ್ ಗೊಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News