ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಪಂತ್ ಹೆಸರು ನಾಮನಿರ್ದೇಶನ

Update: 2021-02-03 04:40 GMT

ದುಬೈ: ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ ಅವರು ಇಂಗ್ಲೆಂಡ್‌ನ ನಾಯಕ ಜೋ ರೂಟ್ ಹಾಗೂ ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ ಅವರೊಂದಿಗೆ ಮಂಗಳವಾರ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಆಸ್ಟ್ರೇಲಿಯದಲ್ಲಿ ಐತಿಹಾಸಿಕ ಗೆಲುವಿನ ರೂವಾರಿ 23ರ ಹರೆಯದ ಪಂತ್ ಆಸ್ಟ್ರೇಲಿಯ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಸಿಡ್ನಿಯಲ್ಲಿ 97 ರನ್ ಗಳಿಸಿ ಪಂದ್ಯ ಡ್ರಾ ಆಗಲು ನೆರವಾಗಿದ್ದರು. ಬ್ರಿಸ್ಬೇನ್ ನಲ್ಲಿ ಔಟಾಗದೆ 89 ರನ್ ಗಳಿಸಿ ಭಾರತವು ಐತಿಹಾಸಿಕ ಸರಣಿ ಗೆಲ್ಲುವಲ್ಲ್ಲೂ ಪ್ರಮುಖ ಕಾಣಿಕೆ ನೀಡಿದ್ದರು.

ಜನವರಿಯಲ್ಲಿ ರೂಟ್ ಶ್ರೀಲಂಕಾ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. 228 ರನ್ ಹಾಗೂ 186 ರನ್ ಗಳಿಸುವುದರೊಂದಿಗೆ ತಂಡವು 2-0 ಅಂತರದಿಂದ ಟೆಸ್ಟ್ ಪಂದ್ಯ ಗೆಲ್ಲಲು ಕಾರಣರಾಗಿದ್ದರು.

ಪ್ರಶಸ್ತಿಗೆ ನಾಮನಿರ್ದೇಶಿತಗೊಂಡಿರುವ ಮೂರನೇ ಆಟಗಾರ ಸ್ಟಿರ್ಲಿಂಗ್ ಯುಎಇ ವಿರುದ್ಧ 2 ಏಕದಿನ ಹಾಗೂ ಅಫ್ಘಾನಿಸ್ತಾನದ ವಿರುದ್ಧ್ದ 3 ಏಕದಿನ ಪಂದ್ಯಗಳನ್ನು ಆಡಿದ್ದರು. ಈ ವೇಳೆ 3 ಶತಕಗಳನ್ನು ಸಿಡಿಸಿದ್ದರು.

ಮಹಿಳಾ ಕ್ರಿಕೆಟಿಗರ ಪೈಕಿ ಪಾಕಿಸ್ತಾನದ ಡಯಾನಾ ಬೇಗ್, ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯೀಲ್ ಹಾಗೂ ಮರಿಝಾನೆ ಕಾಪ್ ತಿಂಗಳ ಆಟಗಾರ್ತಿ ಗೌರವಕ್ಕೆ ನಾಮನಿರ್ದೇಶನಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News