×
Ad

ರೈತರ ಪ್ರತಿಭಟನೆ ಕುರಿತು ಸಂಸತ್ತಿನಲ್ಲಿ 15 ಗಂಟೆ ಚರ್ಚಿಸಲು ಸರಕಾರ ಸಮ್ಮತಿ

Update: 2021-02-03 10:58 IST

ಹೊಸದಿಲ್ಲಿ: ರೈತರ ಪ್ರತಿಭಟನೆಯ ಕುರಿತಾಗಿ ಸಂಸತ್ತಿನಲ್ಲಿ 15 ಗಂಟೆಗಳ ಕಾಲ ಚರ್ಚಿಸಲು –ಪ್ರತಿಪಕ್ಷಗಳೊಂದಿಗಿನ ಮಾತುಕತೆಯ ವೇಳೆ ಸರಕಾರವು ಇಂದು ಸಮ್ಮತಿ ನೀಡಿದೆ.

ಎರಡು ದಿನಗಳ ಕಾಲ ಪ್ರಶ್ನೋತ್ತರ ಅವಧಿಯನ್ನು ಅಮಾನತುಗೊಳಿಸಿರುವ ರಾಜ್ಯಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ.
16ಕ್ಕೂ ಅಧಿಕ ವಿರೋಧ ಪಕ್ಷಗಳು ರೈತರ ಪ್ರತಿಭಟನೆಗಳ ಕುರಿತು 5 ಗಂಟೆಗಳ ಸ್ವತಂತ್ರ ಚರ್ಚೆಗೆ ಒತ್ತಾಯಿಸಿದ್ದವು. ಅದನ್ನು 15 ಗಂಟೆಗೆ ಹೆಚ್ಚಿಸಲು ಸರಕಾರ ಒಪ್ಪಿಕೊಂಡಿತು.

ಪ್ರತಿಪಕ್ಷಗಳ ಬೇಡಿಕೆಯನ್ನ ಒಪ್ಪಿದ ನಂತರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಈ ಘೋಷಣೆ ಮಾಡಿದರು.
ಈ ಪ್ರಸ್ತಾವವನ್ನು ಸರಕಾರ ಒಪ್ಪಿಕೊಂಡಿರುವುದರಿಂದ ನಾವು ಚರ್ಚೆಗೆ ಸಿದ್ಧರಿದ್ದೇವೆ ಎಂದು ಕಾಂಗ್ರೆಸ್‍ನ ವಿರೋಧ ಪಕ್ಷದ ನಾಯಕ ಗುಲಾಮ್ ನಬಿ ಆಝಾದ್ ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News