ನೆಟ್ ಪ್ರ್ಯಾಕ್ಟೀಸ್ ಆರಂಭಿಸಿದ ಟೀಮ್ ಇಂಡಿಯಾ

Update: 2021-02-03 06:01 GMT

ಚೆನ್ನೈ: ಇಂಗ್ಲೆಂಡ್‌ನ ವಿರುದ್ಧ ಫೆಬ್ರವರಿ 5ರಿಂದ ಚೆನ್ನೈನಲ್ಲಿ ಆರಂಭವಾಗಲಿರುವ 4 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತೀಯ ಕ್ರಿಕೆಟ್ ತಂಡ ಮಂಗಳವಾರ ಕೊನೆಗೂ ನೆಟ್ ಅಭ್ಯಾಸವನ್ನು ಆರಂಭಿಸಿದೆ. ಮುಖ್ಯ ಕೋಚ್ ರವಿ ಶಾಸ್ತ್ರಿ ಉತ್ಸಾಹಭರಿತ ಭಾಷಣದ ಮೂಲಕ ಇಡೀ ತಂಡವನ್ನು ಸ್ವಾಗತಿಸಿದರು. ಆ ನಂತರ ಇಡೀ ತಂಡ ಮುಂಬರುವ ಸರಣಿಗೆ ತಯಾರಿ ನಡೆಸಲು ಅಭ್ಯಾಸ ಆರಂಭಿಸಿತು.

ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಇಂಗ್ಲೆಂಡ್ ವಿರುದ್ಧ್ದ ಮೊದಲ ಟೆಸ್ಟ್ ಪಂದ್ಯಕ್ಕಿಂತ ಮೊದಲು ಸೋಮವಾರ ಹೊರಾಂಗಣದಲ್ಲಿ ಅಭ್ಯಾಸ ನಡೆಸಿತು. ಕೊರೋನವೈರಸ್‌ಗಾಗಿ ಮೂರು ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಿಯಮಿತ ಅಂತರದಲ್ಲಿ ನಡೆಸಲಾಯಿತು. ಎಲ್ಲಾ ಭಾರತೀಯ ಆಟಗಾರರ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಆಗಿತ್ತು. 6 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ ಆತಿಥೇಯ ಭಾರತಕ್ಕೆ ಮಂಗಳವಾರದಿಂದ ಅಭ್ಯಾಸ ನಡೆಸಲು ಅನುಮತಿ ನೀಡಲಾಗಿದೆ. ಇದೇ ವೇಳೆ, ಇಂಗ್ಲೆಂಡ್ ತಂಡ ಕೂಡ ರವಿವಾರ 3ನೇ ಬಾರಿ ನಡೆಸಿರುವ ಕೊರೋನ ವೈರಸ್ ಟೆಸ್ಟ್ ನಲ್ಲಿ ನೆಗೆಟಿವ್ ವರದಿ ಪಡೆದಿದೆ. ಜೋ ರೂಟ್ ಬಳಗ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ ಮಧ್ಯಾಹ್ನ ಅಭ್ಯಾಸವನ್ನು ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News