ಬೊಳ್ಳೂರು ಮುಹಿಯ್ಯುದ್ದೀನ್ ಜುಮಾ ಮಸೀದಿಯ ಗಲ್ಫ್ ಸಮಿತಿ ಅಸ್ತಿತ್ವಕ್ಕೆ

Update: 2021-02-03 07:21 GMT

ಜುಬೈಲ್ : ಇಲ್ಲಿನ ಮುಹಿಯ್ಯುದ್ದೀನ್ ಜುಮಾ ಮಸೀದಿ ಬೊಳ್ಳೂರು ಇದರ ನೂತನ ಗಲ್ಫ್ ಸಮಿತಿ ಆಯ್ಕೆಯು ಸೌದಿ ಅರೆಬಿಯಾದ ಜುಬೈಲ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಅನೀಸ್ ಹುಸೈನ್ ಬೊಳ್ಳೂರು ಇವರು ಕಿರಾಅತ್ ಮೂಲಕ ಉದ್ಘಾಟಿಸಿ ಗಲ್ಫ್ ಸಮಿತಿ ಕಾರ್ಯಗಳು ಮತ್ತು ನೂತನ ಯೋಜನೆಗಳ ಕುರಿತು ಮಾಹಿತಿ ನೀಡಿದರು. 2021-22 ನೇ ಸಾಲಿನ ನೂತನ ಅಧ್ಯಕ್ಷರಾಗಿ ಅನೀಸ್ ಹುಸೈನ್ ಬೊಳ್ಳೂರು ಇವರನ್ನು  ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಎ.ಕೆ ಕಬೀರ್, ಪ್ರಧಾನ ಕಾರ್ಯದರ್ಶಿಯಾಗಿ ಎ.ಕೆ. ಸಿರಾಜುದ್ದಿನ್, ಜೊತೆ ಕಾರ್ಯದರ್ಶಿಯಾಗಿ ಸಿನಾನ್ ರೈಲ್ವೆಗೇಟ್ ಮತ್ತು ಝಮೀರ್ ಕೊಪ್ಪಳ, ಗಲ್ಫ್ ಸಮೀತಿ ಕೋ ಆರ್ಡಿನೇಟರ್ ಆಗಿ ಕಲಂದರ್ ಪರಂಗಿಬೊಟ್ಟು ಇವರನ್ನು ಆಯ್ಕೆ ಮಾಡಲಾಯಿತು.

ಮಸ್ಕತ್  ಕೋ ಆರ್ಡಿನೇಟರ್ ಆಗಿ ಮೈದಿನ್ ಪರಂಗಿಬೊಟ್ಟು, ಕತಾರ್ ಕೋ ಆರ್ಡಿನೇಟರ್ ಆಗಿ ಆಶ್ರಫ್ ಇಂದಿರಾನಗರ ಇವರನ್ನು ಆಯ್ಕೆ ಮಾಡಲಾಯಿತು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News