×
Ad

ಉಡುಪಿ ಸುಲ್ತಾನ್ ಗೋಲ್ಡ್‌ನಲ್ಲಿ ಹೊಸ ಡೈಮಂಡ್ ಆಭರಣಗಳ ಅನಾವರಣ

Update: 2021-02-03 19:10 IST

ಉಡುಪಿ, ಫೆ.3: ಸುಲ್ತಾನ್ ಡೈಮಂಡ್ ಆ್ಯಂಡ್ ಗೋಲ್ಡ್  ಉಡುಪಿ ಶಾಖೆಯ ವತಿಯಿಂದ ಹೊಸ ಡೈಮಂಡ್ ಆಭರಣಗಳ ಸಂಗ್ರಹ ಅನಾವರಣ ಕಾರ್ಯಕ್ರಮವು ಬುಧವಾರ ಉಡುಪಿ ಶಾಖೆಯಲ್ಲಿ ಜರಗಿತು.

ಮುಖ್ಯ ಅತಿಥಿಗಳಾದ ಉಡುಪಿ ಅಜ್ಜರಕಾಡು ಗ್ರಾಸ್‌ಲ್ಯಾಂಡ್‌ನ ಪ್ರೊಮಟರ್ ಮತ್ತು ಬಿಲ್ಡರ್ ವಿನಿತ್ ಎಸ್.ಅಮೀನ್ ಡೈಮಂಡ್ ಬ್ಯಾಂಗಲ್, ಉದ್ಯಮಿ ಬಿ.ಸುರೇಶ್ ಭಂಡಾರ್ಕರ್ ಮತ್ತು ಸ್ವರ್ಣ ಭಂಡಾರ್ಕರ್ ದಂಪತಿ ಡೈಮಂಡ್ ನೆಕ್ಲೇಸ್ ಮತ್ತು ಕೆಪಿಸಿಸಿ ಸಂಯೋಜಕ ನವೀನ್‌ ಚಂದ್ರ ಶೆಟ್ಟಿ ಮತ್ತು ನೀತಾ ಎನ್.ಶೆಟ್ಟಿ ಡೈಮಂಡ್ ತನ್‌ಮಾನಿಯಾ ಕಲೆಕ್ಷನ್ ಅನ್ನು ಅನಾವರಣ ಗೊಳಿಸಿದರು.

ಸುಲ್ತಾನ್ ಗೋಲ್ಡ್‌ನ ಉಡುಪಿ ಬ್ರಾಂಚ್ ಮೆನೇಜರ್ ಮುಹಮ್ಮದ್ ಅಜ್ಮಲ್ ಸ್ವಾಗತಿಸಿದರು. ಫ್ಲೋರ್ ಮೆನೇಜರ್ ಸಿದ್ದೀಕ್ ಹಸನ್ ಕಾರ್ಯಕ್ರಮ ನಿರೂಪಿಸಿದರು. ಪಿಆರ್‌ಓ ಮಂಜುನಾಥ್ ಅಮೀನ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಸಿಸ್ಟೆಂಟ್ ಸೇಲ್ಸ್ ಮೆನೇಜರ್‌ಗಳಾದ ಶಮಿಲ್ ಅಬ್ದುಲ್ ಖಾದರ್ ಮತ್ತು ನಝೀರ್ ಅಡ್ಡೂರು ಮ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News