ಶ್ರೀಕೃಷ್ಣ ಮಠದಲ್ಲಿ ಪ್ರಾಣಯೋಗ ತರಬೇತಿ ಉದ್ಘಾಟನೆ
Update: 2021-02-03 20:34 IST
ಉಡುಪಿ, ಫೆ.3: ಪರ್ಯಾಯ ಶ್ರೀಅದಮಾರು ಮಠ ಹಾಗೂ ಪತಂಜಲಿ ಯೋಗ ಸಮಿತಿ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಪ್ರತಿದಿನ ಬೆಳಗ್ಗೆ 5:45 ರಿಂದ 7 ರವರೆಗೆ ನಡೆಯುವ ಉಚಿತ ಪ್ರಾಣಯೋಗ ತರಬೇತಿ ಶಿಬಿರವನ್ನು ಪರ್ಯಾಯ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ದೀ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು.
ಶ್ರೀಕೃಷ್ಣ ಮಠದ ರಾಜಾಂಗಣದ ಮೇಲಿರುವ ಮಧ್ವಾಂಗಣದಲ್ಲಿ ನಡೆಯುವ ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅದಮಾರುಶ್ರೀಗಳು, ಎಲ್ಲರೂ ಜೀವನದಲ್ಲಿ ಯೋಗಾಭ್ಯಾಸವನ್ನು ನಿರಂತರವಾಗಿ ಮಾಡುವುದರಿಂದ ಮನಸ್ಸಿನ ಹತೋಟಿ, ಕಾಯಿಲೆಗಳ ನಿಯಂತ್ರಣ, ಒತ್ತಡ, ಅಶಾಂತಿಯಿಂದ ಮುಕ್ತಿ ಪಡೆಯಲು ಸಾಧ್ಯ.ಉತ್ತಮ ಆರೋಗ್ಯಕ್ಕಾಗಿ ಯೋಗದ ಜೊತೆ ಪ್ರಾಣಾಯಾಮ ಅಳವಡಿಸಿಕೊಳ್ಳಿ ಎಂದರು.
ವೇದಿಕೆಯಲ್ಲಿ ವಿಶ್ವನಾಥ್ ಭಟ್, ಲೀಲಾ ಅಮೀನ್, ಜಗದೀಶ್ ಉಪಸ್ಥಿತರಿದ್ದರು. ಯೋಗ ಗುರುಗಳಾದ ಬೇರೊಳ್ಳಿ ನಾಗರಾಜ್ ಶೇಟ್ ಶಿಬಿರಾರ್ಥಿಗಳಿಗೆ ವಿವಿಧ ರೀತಿಯ ಯೋಗ ತರಬೇತಿ ನೀಡಿದರು.