×
Ad

ಉಡುಪಿ : 11ಇ ಅದಾಲತ್‌ನಲ್ಲಿ 238 ಪ್ರಕರಣ ಇತ್ಯರ್ಥ

Update: 2021-02-03 20:50 IST

ಉಡುಪಿ, ಫೆ.3: ಜಿಲ್ಲೆಯಲ್ಲಿ ಬಾಕಿ ಇರುವ 11ಇ ಪ್ರಕರಣಗಳನ್ನು ಅದಾಲತ್ ನಡೆಸುವುದರ ಮೂಲಕ ಪ್ರಕರಣಗಳಿಗೆ ಅನುಮೋದನೆ ನೀಡಿ ಸ್ಥಳದಲ್ಲಿಯೇ ವಿಲೇವಾರಿಗೊಳಿಸುವ ಸಲುವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅಧ್ಯಕ್ಷತೆಯಲ್ಲಿ 11ಇ ಅದಾಲತ್ ಅನ್ನು ನಡೆಸಲಾಯಿತು.

ಅನೇಕ ಕಾರಣಗಳಿಂದ ದೀರ್ಘ ಸಮಯದಿಂದ ಬಾಕಿ ಇರುವ ಕಾರ್ಕಳ ತಾಲೂಕಿನ 42, ಹೆಬ್ರಿ ತಾಲೂಕಿನ 30, ಬ್ರಹ್ಮಾವರ ತಾಲೂಕಿನ 46, ಕಾಪು ತಾಲೂಕಿನ 18, ಉಡುಪಿ ತಾಲೂಕಿನ 57 ಹಾಗೂ ಬೈಂದೂರು ತಾಲೂಕಿನ 45 ಸೇರಿದಂತೆ ಒಟ್ಟು 238 ಪ್ರಕರಣಗಳನ್ನು ಸ್ಥಳದಲ್ಲಿಯೇ ವಿಲೇವಾರಿಗೊಳಿಸಿ, 11ಇ ಪ್ರಕರಣಗಳಿಗೆ ಅನುಮೋದನೆ ನೀಡಲಾಯಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸಹಾಯಕ ಕಮೀಷನರ್ ರಾಜು ಹಾಗೂ ವಿವಿಧ ತಾಲೂಕುಗಳ ತಹಶೀಲ್ದಾರರು ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News