×
Ad

ಉಚಿತ ಪರೀಕ್ಷಾ ಪೂರ್ವ ತರಬೇತಿ

Update: 2021-02-03 20:53 IST

ಉಡುಪಿ, ಫೆ. 3: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸ್ಟಾಪ್ ಸೆಲೆಕ್ಷನ್ ಕಮೀಷನ್ ಆಯೋಗದ ಆಫೀಸರ್ಸ್‌, ಕ್ಲರ್ಕ್ ವಿವಿಧ ಹುದ್ದೆಗಳ ನೇಮಕಾತಿಗೆ ಎಪ್ರಿಲ್ ನಂತರದ ತಿಂಗಳಲ್ಲಿ ಸಾಮಾನ್ಯ ಲಿಖಿತ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಸಂಬಂಧಿಸಿದಂತೆ ಸ್ಟಡಿ ಸರ್ಕಲ್ ಯೋಜನೆ ಯಡಿ, ಉಡುಪಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಆಶ್ರಯದಲ್ಲಿ ಉಚಿತ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ತರಬೇತಿ ತರಗತಿಗಳನ್ನು ವಾರದ ದಿನಗಳಲ್ಲಿ ಹಾಗೂ ರಜಾದಿನಗಳಲ್ಲಿ ನಡೆಸಲಾಗುವುದು. ತರಬೇತಿಯು ಉಚಿತವಾಗಿದ್ದು, ತರಬೇತಿ ಪಡೆಯಲ್ಛಿಸುವ ಅ್ಯರ್ಥಿಗಳು ಹೆಸರನ್ನು ಖುದ್ದಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ನೋಂದಾಯಿಸಲು ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ದೂರವಾಣಿ ಸಂಖ್ಯೆ: 0820-2574869ನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದೊ್ಯೀಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News