ಬಂಡೆಕಲ್ಲಿನಿಂದ ಬಿದ್ದು ಮೃತ್ಯು
Update: 2021-02-03 21:46 IST
ಹೆಬ್ರಿ, ಫೆ.3: ಶಿವಪುರ ಗ್ರಾಮದ ಎಲಿಪಾದೆ ಬಂಡೆಯಿಂದ ಬಿದ್ದು ವ್ಯಕ್ತಿ ಯೊಬ್ಬರು ಮೃತಪಟ್ಟ ಘಟನೆ ಫೆ.2ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಶಿವಪುರ ಮಾರ್ಮಕ್ಕಿ ನಿವಾಸಿ ನರಸ ನಾಯ್ಕ ಎಂಬವರ ಮಗ ಪ್ರಸಾದ(36) ಎಂದು ಗುರುತಿಸಲಾಗಿದೆ. ಮೇಸ್ತ್ರಿ ಕೆಲಸ ಮಾಡಿ ಕೊಂಡಿದ್ದ ಇವರು, ವಿಪರೀತ ಮದ್ಯ ಸೇವಿಸುವ ಚಟ ಹೊಂದಿದ್ದರು. ರಾತ್ರಿ ಮನೆಯಲ್ಲಿ ದನಗಳು ಕಾಣದ ಕಾರಣ ಹುಡುಕಲು ಹೋದ ಪ್ರಸಾದ್, 5-6 ಅಡಿ ಎತ್ತರದ ಕಲ್ಲು ಬಂಡೆಯಿಂದ ಕೆಳಗೆ ಬಿದ್ದರೆನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಅವರು, ಹೆಬ್ರಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.