ರಶ್ಯದಲ್ಲಿ ಮತ್ತೆ ಬೃಹತ್ ಧರಣಿ; 1,050 ಮಂದಿಯ ಬಂಧನ

Update: 2021-02-03 17:10 GMT

ಮಾಸ್ಕೋ (ರಶ್ಯ), ಫೆ. 3: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಯನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಮತ್ತೊಂದು ಬೃಹತ್ ಧರಣಿ ನಡೆದಿದೆ.

ಅದೇ ವೇಳೆ, ಪೊಲೀಸರು ಧರಣಿನಿರತ 1,050ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ ಎಂದು ಸರಕಾರೇತರ ಸಂಘಟನೆ ಒವಿಡಿ-ಇನ್ಫೊ ತಿಳಿಸಿದೆ.

ಹೆಚ್ಚಿನ ಸಂಖ್ಯೆಯ ಬಂಧನಗಳನ್ನು ರಾಜಧಾನಿ ಮಾಸ್ಕೋದಲ್ಲಿ ಮಾಡಲಾಗಿದೆ.

ನ್ಯಾಯಾಧೀಶರೊಬ್ಬರು ನವಾಲ್ನಿಗೆ ಎರಡು ವರ್ಷಕ್ಕಿಂತಲೂ ಅಧಿಕ ಅವಧಿಯ ಜೈಲು ಶಿಕ್ಷೆ ಘೋಷಿಸಿದ ಬಳಿಕ ಅವರ ಬೆಂಬಲಿಗರು ದೇಶಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News