×
Ad

ಫೆ.7: ಸುರತ್ಕಲ್ ಟೋಲ್‌ಗೇಟ್ ರದ್ದತಿಗೆ ಒತ್ತಾಯಿಸಲು ಸಭೆ

Update: 2021-02-04 15:13 IST

ಮಂಗಳೂರು, ಫೆ.4: ಟೋಲ್‌ಗೇಟ್‌ಗಳಲ್ಲಿ ಫಾಸ್ಟಾಗ್ ಕಡ್ಡಾಯ ಮಾಡುವುದು ಮತ್ತು ಸ್ಥಳೀಯರಿಗೆ ವಿನಾಯಿತಿ ರದ್ದುಗೊಳಿಸಲು ಸಿದ್ಧತೆ ನಡೆದಿರುವ ಮಧ್ಯೆಯೇ ಸುರತ್ಕಲ್ ಟೋಲ್‌ಗೇಟನ್ನೇ ಮುಚ್ಚುವಂತೆ ಆಗ್ರಹಿಸಿ ಧರಣಿ ನಡೆಸಲು ಸ್ಥಳೀಯರು ಮುಂದಾಗಿದ್ದಾರೆ.

ಅದರಂತೆ ಈ ಬಗ್ಗೆ ಚರ್ಚಿಸಲು ಫೆ.7ರಂದು ಬೆಳಗ್ಗೆ 9ಕ್ಕೆ ಮುಕ್ಕದಲ್ಲಿರುವ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ.

ಸುರತ್ಕಲ್‌ನಲ್ಲಿರುವ ಟೋಲ್‌ಗೇಟ್ ಅಕ್ರಮವಾಗಿದೆ. ಅದಕ್ಕೆ ಮಾನ್ಯತೆ ಇಲ್ಲ. ಈ ಹಿಂದೆ ಅನೇಕ ಬಾರಿ ಪ್ರತಿಭಟನೆ ನಡೆಸಿದಾಗ ಸ್ಥಳೀಯರು ಅದನ್ನು ರದ್ದುಗೊಳಿಸುತ್ತೇವೆ, ಹೆಜಮಾಡಿ ಜೊತೆ ವಿಲೀನ ಮಾಡುತ್ತೇವೆ ಎಂದಿದ್ದರು. ಆದರೆ ಅದಿನ್ನೂ ಮುಂದುವರಿದಿದ್ದರಿಂದ ಅಸಮಾಧಾನಗೊಂಡಿರುವ ಸ್ಥಳೀಯರು ಟೋಲ್‌ಗೇಟ್ ರದ್ದತಿಗೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News