ಕ್ರೀಡಾಪಟುವಿಗೆ ಎನ್‌ಎಸ್‌ಯುಐನಿಂದ ಧನಸಹಾಯ
Update: 2021-02-04 17:32 IST
ಉಡುಪಿ, ಫೆ.4: ಅಸ್ಸಾಂನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಸ್ಪರ್ಧೆಯಲ್ಲಿ (100ಮೀ. ಓಟ) ಭಾಗವಹಿಸಲು ಆಯ್ಕೆಯಾಗಿರುವ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿನಿ ಶ್ರದ್ಧಾ ಕುಂದರ್ ಇವರಿಗೆ ಸ್ಪರ್ಧಾ ಸ್ಥಳವಾದ ಅಸ್ಸಾಂಗೆ ತೆರಳಲು ಉಡುಪಿ ಜಿಲ್ಲಾ ಎನ್‌ಎಸ್‌ಯುಐ ಅಧ್ಯಕ್ಷ ಸೌರಭ್ ಬಲ್ಲಾಳ್ ನೇತೃತ್ವದಲ್ಲಿ ಸಂಗ್ರಹಿಸಿದ 40 ಸಾವಿರ ರೂ.ವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಹಕರಿಸಿದ ಕೃಷ್ಣಮೂರ್ತಿ ಆಚಾರ್ಯ ಹಾಗೂ ಇತರ ಕಾಂಗ್ರೆಸ್ ನಾಯಕರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ಸೌರಭ್ ಬಲ್ಲಾಳ್, ಹರಿಶ್ಚಂದ್ರ ಕೊಡವೂರು, ರೆಯಾನ್ಸ್, ತಿಲಕ್, ಕಾರ್ತಿಕ್, ಕೋಚ್ ಕಿಶೋರ್‌ಕುಮಾರ್, ರವಿ ಮೊದಲಾದವರು ಈ ಸಂದರ್ಭ ದಲ್ಲಿ ಉಪಸ್ಥಿತರಿದ್ದರು.