ನೂತನ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆ
Update: 2021-02-04 17:33 IST
ಉಡುಪಿ, ಫೆ.4: ಯುವಶಕ್ತಿ ಕಾರ್ನಟಕ ಸಮಿತಿ ವತಿಯಿಂದ ಕರ್ನಾಟಕ ರಕ್ಷಣ ವೇದಿಕೆ(ನಾರಾಯಣ ಗೌಡ ಬಣ) ನೂತನ ಉಡುಪಿ ಜಿಲ್ಲಾಧ್ಯಕ್ಷ ಸುಜಯ ಪೂಜಾರಿ, ನೂತನ ಗ್ರಾಪಂ ಸದಸ್ಯ ಶರತ್ ಶೆಟ್ಟಿ ಹಾಗೂ ಯುವ ಕಾಂಗ್ರೆಸ್ ಉಡುಪಿ ಬ್ಲಾಕ್ ಉಪಾದ್ಯಕ್ಷರಾಗಿ ಆಯ್ಕೆಯಾದ ಹಮೀದ್ ಉಡುಪಿ ಅವರನ್ನು ಇಂದು ಸನ್ಮಾನಿಸಿ ಅಭಿನಂದಿಸಲಾಯಿತು.
ಯುವ ಶಕ್ತಿ ರಾಜ್ಯ ಸಮಿತಿಯ ಪದಾಧಿಕಾರಿಗಳಾದ ಪ್ರಮೋದ್ ಉಚ್ಚಿಲ್, ಸತೀಶ್ ಬನ್ನಂಜೆ, ಶಹೀದ್ ರಝಾ, ಅಜಯ್ ಕುಮಾರ್ ಕಪ್ಪೆಟ್ಟು, ಅರುಣ್ ಕುಮಾರ್, ಸಾಯಿರಾಜ್ ಉಡುಪಿ, ಜೀವನ್ ಕುರ್ಕಾಲು, ಜಗದೀಶ್ ಸುವರ್ಣ, ಹಬೀಬ್ ಉಡುಪಿ, ಉಡುಪಿ ಸಮಿತಿಯ ಶರಣ್, ಧನುಷ್ ಪ್ರಭು, ಕೌಶಿಕ್ ಭಂಡಾರಿ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಲ್ ಮೊದಲಾದವರು ಉಪಸ್ಥಿತರಿದ್ದರು.