×
Ad

ಕುಂದಾಪುರ, ಬೈಂದೂರು ಕಾರ್ಮಿಕರ ಸಮಸ್ಯೆ ಪರಿಹರಿಸುವಂತೆ ಮನವಿ

Update: 2021-02-04 17:35 IST

ಕುಂದಾಪುರ, ಫೆ.4: ಕುಂದಾಪುರ ಹಾಗೂ ಬೈಂದೂರು ಅವಳಿ ತಾಲೂಕು ಗಳ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಬೈಂದೂರು ಮತ್ತು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದೆ.

ಕುಂದಾಪುರ ಕಾರ್ಮಿಕರ ನಿರೀಕ್ಷಕರ ಕಚೇರಿಯಲ್ಲಿ ಕಳೆದ 4 ತಿಂಗಳಿಂದ ಕಾರ್ಮಿಕ ನಿರೀಕ್ಷಕರ ಹುದ್ದೆ ಭರ್ತಿಯಾಗಿರುವುದಿಲ್ಲ. ಈ ಕಚೇರಿಗೆ ವಾರ ಕ್ಕೊಂದು ಬಾರಿ ಕಾರ್ಕಳ ನಿರೀಕ್ಷಕರು ಬರುತ್ತಿದ್ದಾರೆ. ಇದರಿಂದಾಗಿ ಸಾವಿರಾರು ಕಾರ್ಮಿಕರಿಗೆ ಸಕಾಲದಲ್ಲಿ ನಿರೀಕ್ಷಕರು ಲಭ್ಯವಿಲ್ಲದೆ ಹಲವಾರು ಕೆಲಸಗಳಿಗೆ ತೊಂದರೆಯಾಗುತ್ತಿದೆ. ಆದುದರಿಂದ ಕೂಡಲೇ ಕುಂದಾಪುರ ನಿರೀಕ್ಷಕರ ಕಛೇರಿ ಯಲ್ಲಿ ಖಾಯಂ ನಿರೀಕ್ಷಕರನ್ನು ನೇಮಿಸಲು ಕ್ರಮವಹಿಸಬೇಕು ಎಂದು ಸಂಘ ಒತ್ತಾಯಿಸಿದೆ.

ಸರಕಾರ ಬೈಂದೂರುನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿ ಸರಿ ಸುಮಾರು ಎರಡು ವರ್ಷಗಳು ಕಳೆದರೂ ಬೈಂದೂರಿನ ತಾಲೂಕು ಕೇಂದ್ರಕ್ಕೆ ಇಂದಿಗೂ ಕಾರ್ಮಿಕ ನಿರೀಕ್ಷಕರ ಕಛೇರಿ ಆರಂಭಿಸಿಲ್ಲ. ಬೈಂದೂರು ತಾಲೂಕಿನ ಸಾವಿರಾರು ಕಾರ್ಮಿಕರು ಕುಂದಾಪುರ ನಿರೀಕ್ಷಕರ ಕಛೇರಿಯನ್ನೇ ಅವಲಂಭಿಸಿ ದ್ದಾರೆ. ಕಾರ್ಮಿಕರ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಬೈಂದೂರಿಗೆ ಶೀಘ್ರ ವಾಗಿ ಕಾರ್ಮಿಕರ ನಿರೀಕ್ಷಕರ ಕಚೇರಿ ಆರಂಭಿಸಲು ಸರಕಾರ ಮಧ್ಯಪ್ರವೇಶಿಸ ಬೇಕು ಎಂದು ಸಂಘದ ಕುಂದಾಪುರ ಅಧ್ಯಕ್ಷ ಯು.ದಾಸಭಂಡಾರಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಬೈಂದೂರು ಅಧ್ಯಕ್ಷ ರಾಜೀವ ಪಡು ಕೋಣೆ, ಪ್ರಧಾನ ಕಾರ್ಯದರ್ಶಿ ಗಣೇಶ ತೊಂಡೆಮಕ್ಕಿ ಮನವಿಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News