ಫೆ.5ರಂದು ಕುಡಿಯುವ ನೀರು ವ್ಯತ್ಯಯ
Update: 2021-02-04 20:46 IST
ಉಡುಪಿ, ಫೆ.4: ಉಡುಪಿ ನಗರಸಭೆಗೆ ಕುಡಿಯುವ ನೀರು ಸರಬರಾಜು ಮಾಡುವ ಬಜೆ ನೀರು ಸರಬರಾಜು ಪಂಪಿಂಗ್ ಸ್ಟೇಷನ್ ವ್ಯಾಪ್ತಿಯಲ್ಲಿ ಫೆ.4 ರಂದು ಪೂರ್ವಾಹ್ನ 9.30ರಿಂದ ಸಂಜೆ 5.30ರವರೆಗೆ ವಿದ್ಯುತ್ ನಿಲುಗಡೆ ಯಾಗಿರುವುದರಿಂದ ಫೆ.5ರಂದು ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕುಡಿ ಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರಸಭೆ ಪೌರಾಯುಕ್ತ ಉದಯ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.