ಫೆ.5ರಂದು ಮೂಲನಿವಾಸಿಗಳ ಕ್ರಿಕೆಟ್ ಸ್ಪರ್ಧೆ ಉದ್ಘಾಟನೆ
Update: 2021-02-04 21:29 IST
ಉಡುಪಿ, ಫೆ. 4: ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪಯೋಜನೆ ಅಡಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ವಾಸವಾಗಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಮೂಲ ನಿವಾಸಿಗಳಿಗೆ ನಡೆಯಲಿರುವ ವಿಶೇಷ ಕ್ರೀಡಾಕೂಟದ ಕ್ರಿಕೆಟ್ ಸ್ಪರ್ಧೆಯ ಉದ್ಘಾಟನೆ ಫೆ.5ರಂದು ಬೆಳಗ್ಗೆ 9 ಗಂಟೆಗೆ ಎಂಜಿಎಂ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ.
ಸ್ಪರ್ಧೆಯನ್ನು ಜಿಪಂ ಅದ್ಯಕ್ಷ ದಿನಕರಬಾಬು ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಜಿ.ಜಗದೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಡಾ.ನವೀನ್ ಭಟ್ ವೈ. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ ಪಾಲ್ಗೊಳ್ಳಲಿದ್ದಾರೆ.
ಉದ್ಘಾಟನಾ ಸಮಾರಂದ ಬಳಿಕ ಕ್ರಿಕೆಟ್ ಸ್ಪರ್ಧೆಗಳನ್ನು ಎಂಜಿಎಂ ಕಾಲೇಜು ಕ್ರೀಡಾಂಗಣದ ಎರಡು ಅಂಕಣ, ದೊಡ್ಡಣಗುಡ್ಡೆ ಮೈದಾನ ಹಾಗೂ ನೇಜಾರು ಕ್ರೀಡಾಂಗಣಗಳಲ್ಲಿ ಏಕಕಾಲದಲ್ಲಿ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ