×
Ad

ಪಣಂಬೂರು ದೇವಸ್ಥಾನದ ಚಪ್ಪರಕ್ಕೆ ಆಕಸ್ಮಿಕ ಬೆಂಕಿ

Update: 2021-02-04 22:23 IST

ಮಂಗಳೂರು, ಫೆ.4: ನಗರದ ಪಣಂಬೂರು ಶ್ರೀನಂದನೇಶ್ವರ ದೇವಸ್ಥಾನದ ಚಪ್ಪರಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಗುರುವಾರ ಸಂಭವಿಸಿದೆ.

ನಂದನೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಚಪ್ಪರಕ್ಕೆ ಅಕಸ್ಮಾತ್ತಾಗಿ ಬೆಂಕಿ ತಗುಲಿದೆ. ವಾರ್ಷಿಕ ಜಾತ್ರಾ ಮಹೋತ್ಸವದ ನಿಮಿತ್ತ ಬಲಿ ಪೂಜೆ ವೇಳೆ ಈ ಅವಘಡ ಸಂಭವಿಸಿದೆ. ತಕ್ಷಣ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ಈ ಸಂದರ್ಭ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News