'ಆಟೋರಿಕ್ಷಾ ಮುಂಬದಿ ಕವಚದ ಮೇಲೆ ಹಸಿರು ಬಣ್ಣದ ಪಟ್ಟಿ ಕಡ್ಡಾಯ'
Update: 2021-02-04 22:25 IST
ಮಂಗಳೂರು, ಫೆ. 4: ಮಂಗಳೂರು ಗ್ರಾಮಾಂತರ ಪ್ರದೇಶಗಳಿಂದ ನಗರ ಪ್ರವೇಶಿಸುವ ಆಟೊರಿಕ್ಷಾಗಳ ಮುಂಭಾಗದ ಕವಚದ ಮೇಲೆ ಹಸಿರು ಬಣ್ಣದ ಪಟ್ಟಿಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ತಿಳಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ರೋಗಿಗಳು ಹಾಗೂ ವಯೋವೃದ್ಧರನ್ನು ವೈದ್ಯಕೀಯ ತಪಾಸಣೆಗಾಗಿ ಕರೆದುಕೊಂಡು ಬಂದು, ಹೋಗುವಾಗ ಮತ್ತು ನಗರದೊಳಗೆ ಪ್ರಯಾಣಿಕರನ್ನು ಅವರು ಹೇಳಿರುವ ಸ್ಥಳಗಳಿಗೆ ತಲುಪಿಸುವಂತಹ ಆಟೋ ರಿಕ್ಷಾಗಳನ್ನು ಸುಲಭವಾಗಿ ಗುರುತಿಸುವ ಸಲುವಾಗಿ ಈಗಾಗಲೇ ನಿರ್ಣಯಿಸಿರುವಂತೆ ಹಸಿರು ಪಟ್ಟಿ (ಬಜಾಜ್ ಗ್ರೀನ್) ಅಳವಡಿಸಲು ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.