×
Ad

ಟಿಸಿಎಸ್ ಟೆಕ್‌ಬೈಟ್ಸ್ ವರ್ಚುವಲ್ ಕ್ವಿಝ್

Update: 2021-02-04 22:44 IST

ಮಂಗಳೂರು, ಫೆ.4: ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಕರ್ನಾಟಕ ಸರ್ಕಾರದ ಐಟಿ ಶಿಕ್ಷಣ ಗುಣಮಟ್ಟ ಮಂಡಳಿ (ಬಿಐಟಿಇಎಸ್) ಜಂಟಿ ಆಶ್ರಯದಲ್ಲಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಿಗಾಗಿ 12ನೇ ಆವೃತ್ತಿಯ ಟಿಸಿಎಸ್ ಟೆಕ್‌ಬೈಟ್ಸ್ ವರ್ಚುವಲ್ ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ರಾಜ್ಯದ ಎಲ್ಲ ಶಾಖೆ ಮತ್ತು ಸೆಮಿಸ್ಟರ್‌ನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮುಕ್ತವಾಗಿರಲಿದೆ. ಈ ಬಾರಿ ಐಟಿ ಕ್ವಿಜ್ ಸ್ಪರ್ಧೆಯು ಸಂಪೂರ್ಣವಾಗಿ ಡಿಜಿಟಲ್ ಸ್ವರೂಪದಲ್ಲಿ ಇರಲಿದೆ.

ವಿದ್ಯಾರ್ಥಿಗಳ ಜ್ಞಾನದ ಕ್ಷಿತಿಜ ವಿಸ್ತರಿಸುವ ಮತ್ತು ತ್ವರಿತವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಆಧಾರಿತ ಉದ್ದಿಮೆಯಲ್ಲಿ ಸಮರ್ಥವಾಗಿ ಸ್ಪರ್ಧಿಸಲು ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸುವ ಉದ್ದೇಶ ಹೊಂದಿದೆ. ರಸಪ್ರಶ್ನೆ ಕಾರ್ಯಕ್ರಮದ ಪ್ರಾದೇಶಿಕ ಅಂತಿಮ ಸುತ್ತಿನಲ್ಲಿ ಭಾಗವಹಿಸಲು ಪ್ರತಿಯೊಂದು ಶಿಕ್ಷಣ ಸಂಸ್ಥೆಯು 20 ವಿದ್ಯಾರ್ಥಿಗಳ ತಂಡ ಕಳಿಸಬಹುದಾಗಿದೆ. ಪ್ರವೇಶ ಶುಲ್ಕ ಇರುವುದಿಲ್ಲ. ಶಿಕ್ಷಣ ಸಂಸ್ಥೆಗಳು ಪ್ರವೇಶ ಪತ್ರಗಳನ್ನು ಕಳಿಸಲು ಫೆ.25 ಕೊನೆಯ ದಿನ. ಪ್ರವೇಶ ಪತ್ರಗಳನ್ನು bitesitquiz@gmail.com ವಿಳಾಸಕ್ಕೆ ಕಳಿಸಬೇಕು. ಹೆಚ್ಚಿನ ಮಾಹಿತಿಗೆ 080-41235889ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News