×
Ad

ಸರಕಾರದ ಕೃಷಿ ನೀತಿಯ ಬಗ್ಗೆ ಅಪಪ್ರಚಾರ ಸಲ್ಲದು: ದ.ಕ ಜಿಲ್ಲಾ ಬಿಜೆಪಿ ರೈತ ಮೋರ್ಚಾ

Update: 2021-02-05 23:58 IST

ಮಂಗಳೂರು,ಫೆ.5: ಕೇಂದ್ರ ಸರಕಾರದ ನೂತನ ಕೃಷಿ ನೀತಿ ಅನ್ನದಾತರ ಕಲ್ಯಾಣಕ್ಕಾಗಿ ರೂಪಿಸಲಾಗಿದೆ. ರೈತರು ತಮ್ಮ ಉತ್ಪನ್ನಗಳನ್ನು ದೇಶದ ಯಾವ ರಾಜ್ಯಗಳಲ್ಲೂ ತಗೆದುಕೊಂಡು ಹೋಗಿ ಮಾರಾಟ ಮಾಡಬಹುದು. ಗೋದಾಮುಗಳಲ್ಲಿರುವ ಧಾನ್ಯ ಅಥವಾ ಕೃಷಿ ಉತ್ಪನ್ನವನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಮಾರಾಟ ಮಾಡಬಹುದು. ಕೃಷಿ ಸುಧಾರಣೆಗಳು ರೈತರಿಗೆ ಯಾವುದೇ ರೀತಿಯಲ್ಲಿ ಮಾರಕವಾಗಿಲ್ಲ .ಕೃಷಿ ಮಾರುಕಟ್ಟೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಕೃಷಿ ಮಂಡಿಗಳ ಕಚೇರಿಗಳನ್ನು ಉತ್ತಮಗೊಳಿಸಲು ಮತ್ತು ಅವುಗಳನ್ನು ಗಣಕೀಕರಣಮಾಡಲು ಸಾಕಷ್ಟು ಕೆಲಸಕಾರ್ಯಗಳು ನಡೆಯುತ್ತಿದೆ. ಆದರೆ ಕೃಷಿ ಮಂಡಿಗಳನ್ನು ಮುಚ್ಚಲ್ಪಡುತ್ತದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅದು ಸತ್ಯಕ್ಕೆ ದೂರವಾದದ್ದು, ರೈತರಿಗೆ ಈ ರೀತಿಯ ಸುಳ್ಳನ್ನು ಯಾರಾದರು ಹೇಳಿದರೂ ನಂಬಬೇಡಿ ಎಂದು ದ.ಕ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರ ರೈತ ಪರ ಸುಧಾರಣೆಗಳು ತರುತ್ತಿದೆ. ರೈತರನ್ನು ಮತ್ತು ಕೃಷಿ ಆರ್ಥಿಕತೆಯನ್ನು ವರ್ಷಗಳ ಗುಲಾಮಗಿರಿಯಿಂದ ಮುಕ್ತಗೊಳಿಸಿದೆ. ಈ ಭಾರತದ ರೈತರಿಗೆ ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿಯಾದರೂ ಮಾರಾಟ ಮಾಡುವ ಸ್ವಾತಂತ್ರ್ಯ ಸಿಕ್ಕಿದೆ. ಜತೆಯಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರವಾಗಿ ವರ್ಗಾಸುವುದಾಗಲಿ ಅಥವಾ ರೈತರಿಗೆ ಪಿಂಚಣಿ ಯೋಜನೆಯ ನಿರ್ಧಾರವೇ ಆಗಿರಲಿ, ನಮ್ಮ ಸರಕಾರಗಳ ಗಮನವು ರೈತರನ್ನು ಸಬಲೀಕರಿಸುವುದಾಗಿದೆ. ಈಗ ಈ ಯೋಜನೆಗಳು ರೈತರು ದೊಡ್ಡ ಮಾರುಕಟ್ಟೆ ಶಕ್ತಿಯಾಗಿ ಬೆಳೆಯಲು ಸಹಕಾರಿ. ರೈತರು ಎಪಿಎಂಸಿ ಮಾರುಕಟ್ಟೆ ಒಳಗೆ ಮಾರಾಟ ಮಾಡಲು ಬಯಸಿದರೆ, ಎಲ್ಲಿ ಬೇಕಾದರೂ ಮಾರಾಟ ಮಾಡುವ ಕಾನುನು ಮುಂದುವರಿಯುತ್ತದೆ,

ಎಂಎಸ್‌.ಪಿಯು ರೈತರಿಗೆ ಸುರಕ್ಷತಾ ಭಾಗವಾಗಿ ಕಾರ್ಯನಿರ್ವಹಿಸುತ್ತದೆ. ಖರೀದಿದಾರರು ತಮ್ಮ ಮನೆ ಬಾಗಿಲಲ್ಲಿ ಉತ್ಪನ್ನ ಖರೀಸಲು ಬಂದರೆ ರೈತರು ಅವರಿಗೆ ಮಾರಾಟಮಾಡಬಹುದು. ಹಾಗೆ ಮಾಡುವಾಗ ಅವರ ಹಕ್ಕುಗಳನ್ನು ರಕ್ಷಿಸಲು ಇದಕ್ಕೆ ಒಂದು ಕಾನೂನಿನ ಚೌಕಟ್ಟು ಇರುತ್ತದೆ ಎಂದು ರಾಧಾಕೃಷ್ಣ ಸರಕಾರದ ಕೃಷಿ ನೀತಿಯನ್ನು ಸಮರ್ಥಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಧಾಕೃಷ್ಣ ಬೂಡಿಯಾರ್, ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳಾದ ರಾಘವೇಂದ್ರ ಭಟ್, ವಸಂತ್ ಅಣ್ಣಳಿಕೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News