ಅಂತರ್ಜಾಲದಲ್ಲಿ ಚರ್ಚೆಗೆ ಗ್ರಾಸವಾದ ರೋಹಿತ್ ಶರ್ಮಾರ ಬೌಲಿಂಗ್ ಶೈಲಿ

Update: 2021-02-06 16:46 GMT

ಚೆನ್ನೈ: ಭಾರತದ ಬೌಲರ್ ಗಳ ಬೆವರಿಳಿಸಿದ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಜೋ ರೂಟ್ ಮೊದಲ ಟೆಸ್ಟ್ ನ ಎರಡನೇ ದಿನದಾಟದಲ್ಲಿ ದ್ವಿಶತಕ ದಾಖಲಿಸಿದರು.  ಇಂಗ್ಲೆಂಡ್ ಬ್ಯಾಟ್ಸ್ ಮನ್ ವಿರುದ್ದ ಪ್ರಮುಖ ಬೌಲರ್ ಗಳು ಪರದಾಡುತ್ತಿದ್ದಾಗ ಭಾರತದ  ನಾಯಕ ವಿರಾಟ್ ಕೊಹ್ಲಿ ಟೀ ವಿರಾಮಕ್ಕೆ ಮೊದಲು ಅರೆಕಾಲಿಕ ಬೌಲರ್ ರೋಹಿತ್ ಶರ್ಮಾಗೆ ಬೌಲಿಂಗ್ ಮಾಡುವ ಅವಕಾಶ ನೀಡಿದರು.

ರೋಹಿತ್ ಅವರ ಬೌಲಿಂಗ್ ಶೈಲಿಯು ಅಂತರ್ಜಾಲದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರೋಹಿತ್ ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಬೌಲಿಂಗ್ ಶೈಲಿಯನ್ನು ಅನುಕರಣೆ ಮಾಡಿದರು.  ಇದು ಭಾರತೀಯ ಕ್ರಿಕೆಟ್ ಅಭಿಮಾನ ಮುಖದಲ್ಲಿ ಮಂದಹಾಸ ಮೂಡಿಸಿತು.

ರೋಹಿತ್ ಕೇವಲ 2 ಓವರ್ ಬೌಲಿಂಗ್ ಮಾಡಿದ್ದು ಕೇವಲ 7 ರನ್ ನೀಡಿದ್ದಾರೆ.

ರೋಹಿತ್ ಪ್ರತಿನಿಧಿಸುತ್ತಿರುವ ಐಪಿಎಲ್ ತಂಡ  ಮುಂಬೈ ಇಂಡಿಯನ್ಸ್ ಹಾಗೂ ಹಾಸ್ಯಭರಿತ ಟ್ವೀಟ್ ಗಳಿಗೆ ಹೆಸರುವಾಸಿಯಾದ ಭಾರತದ ಮಾಜಿ ಆರಂಭಿಕ ಆಟಗಾರ ವಸೀಂ ಜಾಫರ್ ಅವರು ರೋಹಿತ್ ಬೌಲಿಂಗ್ ಕುರಿತಾಗಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News