ಬಿಲ್ಲವ ಮುಖಂಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಧು ಪೂಜಾರಿ ನಿಧನ
Update: 2021-02-07 11:07 IST
ಮಂಗಳೂರು, ಫೆ.7: ಕಾಟಿಪಳ್ಳ ಶ್ರೀನಾರಾಯಣ ಗುರು ಶಿಕ್ಷಣ ಸಮೂಹ ಸಂಸ್ಥೆಗಳ ಸ್ಥಾಪಕ, ಬಿಲ್ಲವ ಸಮುದಾಯದ ಮುಖಂಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಿ. ಸಾಧು ಪೂಜಾರಿ ಅಲ್ಪಕಾಲದ ಅಸೌಖ್ಯದಿಂದ ಶನಿವಾರ ತಡರಾತ್ರಿ ನಿಧನರಾದರು.
ಕೊಡುಗೈದಾನಿಯಾಗಿದ್ದ ಪೂಜಾರಿ ಅವರು ಸರಳ ಸಜ್ಜನಿಕೆಯ ಸ್ವಭಾವದವರು. ಕುಳಾಯಿ ನಿವಾಸಿಯಾಗಿರುವ ಇವರು, ಉದ್ಯಮಿಯಾಗಿ, ಶಿಕ್ಷಣ ಪ್ರೇಮಿಯಾಗಿ ಪ್ರಸಿದ್ಧಿ ಹೊಂದಿದ್ದರು.
ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ