ಮಂಗಳೂರು: ‘ದಿ ಸರ್ಜಿಕಲ್ ಸೆಂಟರ್’ ಉದ್ಘಾಟನೆ
ಮಂಗಳೂರು, ಫೆ.7: ಯುನೈಟೆಡ್ ಟ್ರೇಡಿಂಗ್ ಕಂಪೆನಿ ಬೆಂಗಳೂರು ಇದರ ಘಟಕವಾದ ‘ದಿ ಸರ್ಜಿಕಲ್ ಸೆಂಟರ್’ ರವಿವಾರ ನಗರದಲ್ಲಿ ಶುಭಾರಂಭಗೊಂಡಿತು.
ನಗರದ ನ್ಯೂ ಬಲ್ಮಠ ರಸ್ತೆಯ ಜ್ಯೋತಿ ಸಮೀಪದ ಮನಾರ್ ಕಾಂಪ್ಲೆಕ್ಸ್‌ನ ತಳಮಹಡಿಯಲ್ಲಿರುವ ‘ದಿ ಸರ್ಜಿಕಲ್ ಸೆಂಟರ್’ನ್ನು ಮೇಯರ್ ದಿವಾಕರ ಪಾಂಡೇಶ್ವರ ಮತ್ತು ‘ವಾರ್ತಾಭಾರತಿ’ಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭ ‘ದಿ ಸರ್ಜಿಕಲ್ ಸೆಂಟರ್’ನ ಪಾಲುದಾರರಾದ ಅಲ್ತಾಫ್ ಹುಸೈನ್, ಆಸಿಫ್ ಮಸೂದ್, ಶಕೀರ್ ಮುಹಮ್ಮದ್, ಇಕ್ಬಾಲ್ ಮುಹಮ್ಮದ್ ಉಪಸ್ಥಿತರಿದ್ದರು.
*‘ದಿ ಸರ್ಜಿಕಲ್ ಸೆಂಟರ್’ನಲ್ಲಿ ಆರ್ಥೋಪೆಡಿಕ್ ಉಪಕರಣಗಳಾದ ಕಂಪ್ರೆಸ್ಸೆನ್ ಸ್ಟೋಕಿಂಗ್ಸ್, ಏರ್ ಬೆಡ್, ವಾಟರ್ ಬೆಡ್, ರಿಹೇಬ್ಲೇಶನ್ ಕಿಟ್, ವ್ಹೀಲ್ ಚೇರ್, ಕಮೋಡ್ ಚೇರ್, ಡಿವಿಟಿ ಪಂಪ್ಸ್, ಜನರಲ್ ಗೂಡ್ಸ್ ನೆಬುಲೈಸರ್, ಡಯಾಬೆಟಿಕ್ ಫೂಟ್‌ಕೇರ್, ಗ್ಲುಕೋಮೀಟರ್ಸ್ ಆ್ಯಂಡ್ ಸ್ಟ್ರಿಪ್ಸ್, ಸರ್ಜಿಕಲ್ ಕವಚ, ಡಿಸ್ಪೋಸೆಬಲ್ ಉತ್ಪನ್ನಗಳು, ಸರ್ಜಿಕಲ್ ಸಲಕರಣೆಗಳು ಇತ್ಯಾದಿ ಲಭ್ಯವಿದೆ.
ರವಿವಾರ ಸಹಿತ ವಾರದ ಎಲ್ಲ ದಿನಗಳಲ್ಲೂ ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ‘ಸೆಂಟರ್’ ತೆರೆದಿರುತ್ತದೆ. ರೋಗಿಗಳ ಉಪಾಚಾರಕ್ಕೆ ಸಂಬಂಧಿಸಿದ ಸಲಕರಣೆ ಅಥವಾ ಉಪಕರಣಗಳನ್ನು ಅತ್ಯಂತ ಕಡಿಮೆ ಬಾಡಿಗೆ ದರದಲ್ಲಿ ನೀಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಎನ್‌ಜಿಒ, ಚಾರಿಟೇಬಲ್ ಟ್ರಸ್ಟ್‌ಗಳಿಗೆ ವಿಶೇಷ ರಿಯಾಯಿತಿ ದರದ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 0824-4260777, 8867055777ನ್ನು ಸಂಪರ್ಕಿಸಬಹುದಾಗಿದೆ ಎಂದು ‘ದಿ ಸರ್ಜಿಕಲ್ ಸೆಂಟರ್’ನ ಪಾಲುದಾರರು ತಿಳಿಸಿದ್ದಾರೆ.