×
Ad

ಮಂಗಳೂರು : ಆ್ಯಪಲ್ ಮಾರ್ಟ್ ನಿಂದ ಸಾಧಕರಿಗೆ ಸನ್ಮಾನ

Update: 2021-02-07 17:12 IST

ಮಂಗಳೂರು : ನಗರದ ಪ್ರತಿಷ್ಠಿತ ಸೂಪರ್ ಮಾರ್ಕೆಟ್ 'ಆ್ಯಪಲ್ ಮಾರ್ಟ್' ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಆಟಗಾರ ಮಹಮ್ಮದ್ ರಾಫಿ ಹಾಗು ಸಮಾಜ ಸೇವಕ ಬಶೀರ್ ಸಾಗರ್ ಅವರಿಗೆ ಸನ್ಮಾನ ನೆರೆವೇರಿಸಿತು.

ಕಾಸರಗೋಡು ಮೂಲದ ಮಹಮ್ಮದ್ ರಾಫಿ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ನಲ್ಲಿ  ಸಾಧನೆ ಮಾಡಿದ ಆಟಗಾರನಾಗಿದ್ದು, ಅವರು ತನ್ನ ವೃತ್ತಿ ಜೀವನದಲ್ಲಿ ಮಹೀಂದ್ರ ಯುನೈಟೆಡ್, ಚರ್ಚಿಲ್ ಬ್ರದರ್ಸ್, ಐ ಲೀಗ್ ನಲ್ಲಿ ಮುಂಬೈ ಟೈಗರ್ಸನ್ನು ಪ್ರತಿನಿಧಿಸಿದ್ದಾರೆ. ಅದೇ ರೀತಿ ಇಂಡಿಯನ್ ಸೂಪರ್ ಲೀಗ್ ನ ಚೆನೈಯನ್, ಅತ್ಲೆಟಿಕೊ ಡಿ ಕೊಲ್ಕತ್ತ ಹಾಗೂ ಕೇರಳ ಬ್ಲಾಷ್ಟರ್ ತಂಡದಲ್ಲೂ ತನ್ನ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ. ಅಂತರ್ ರಾಷ್ಟ್ರೀಯವಾಗಿ ಭಾರತ ಪರ ಏಳು ಪಂದ್ಯಗಳನ್ನು ಆಡಿರುವ ರಾಫಿ ಅವರು ಕುವೈತ್‌ ವಿರುದ್ಧದ ಪಂದ್ಯದಲ್ಲಿ ಒಂದು ಗೋಲನ್ನು ಹೊಡೆದಿದ್ದಾರೆ.

ಸೌದಿ ಅರೇಬಿಯಾ ದಲ್ಲಿ ಸ್ಯಾಕೋ ಸಂಸ್ಥೆಯ ಪಾಲುದಾರರಾಗಿರುವ ಬಶೀರ್ ಸಾಗರ್ ಹಲವು ಸಮಾಜ ಸೇವಾ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ಪ್ರಮುಖವಾಗಿ ಸ್ಯಾಕೋ ಸಂಸ್ಥೆಯ ಇನ್ನೊಬ್ಬ ಪಾಲುದಾರ ಅಲ್ತಾಫ್ ಉಳ್ಳಾಲ್ ಅವರ ಜೊತೆ‌ ಸೇರಿ ಕೊರೋನ ಲಾಕ್ ಡೌನ್ ಅವಧಿಯಲ್ಲಿ  ವಿಮಾನಯಾನ ಸಂಪೂರ್ಣ ತಡೆಯಾಗಿದ್ದ ಸಂದರ್ಭ ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿ ಇದ್ದ ಹಿರಿಯ ನಾಗರಿಕರು, ಗರ್ಭಿಣಿಯರು, ವೈದ್ಯಕೀಯ ತುರ್ತುಸ್ಥಿತಿ ಇದ್ದಂತಹ ಹಲವರಿಗೆ ಚಾರ್ಟರ್ ವಿಮಾನ ಮೂಲಕ ಊರಿಗೆ ಸೇರುವ ಅವಕಾಶವನ್ನು ಮಾಡಿಕೊಟ್ಟಿದ್ದು, ವಿಮಾನದ ಸಂಪೂರ್ಣ ವೆಚ್ಚದೊಂದಿಗೆ ಕೊರೋನ ಟೆಸ್ಟ್, ಕ್ವಾರೆಂಟೈನ್ ವೆಚ್ಚವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಭರಿಸಿದ್ದರು.

ಸನ್ಮಾನ ಕಾರ್ಯಕ್ರಮದಲ್ಲಿ ಆ್ಯಪಲ್ ಮಾರ್ಟ್ ಪಾಲುದಾರರು ಹಾಗೂ ಎಕೆ ಸಮೂಹ ಸಂಸ್ಥೆಯ ಡೈರೆಕ್ಟರ್‌ಗಳಾದ ನಿಯಾಝ್ ಎ.ಕೆ., ನಾಝಿಂ ಎ.ಕೆ., ಆರ್ಕಿಟೆಕ್ಟ್ ಮುಹಮ್ಮದ್ ನಿಸಾರ್, ಮುಹಮ್ಮದ್ ಹನೀಫ್ ಹಾಗೂ ರೀಮ್ಸ್ ಸಂಸ್ಥೆಯ ಮಾಲಕ ಮುಖ್ತಾರ್, ಉದ್ಯಮಿ ಫಾರೂಕ್ ಹುಸೈನ್, ಬ್ಯಾರೀಸ್ ಪೋರ್ಟ್ ಪ್ರೊಮೊಟರ್ಸ್‌ನ ಅಧ್ಯಕ್ಷ ಮಹಮ್ಮದ್  ಅಬ್ಬಾಸ್ ಹುಸೈನ್ (ನೂರ್), ಖಾಲಿದ್ ಅಕ್ಯುರೇಟ್, ಹನೀಫ್ ಸಾಗರ್ ಸಿಲ್ಕ್ಸ್ ಹಾಗೂ ಅಬೂಬಕರ್ ಲ್ಯಾಂಡ್ ಟ್ರೇಡ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News