ಉಳ್ಳಾಲ : ಪ್ರತಿಭಾ ಪುರಸ್ಕಾರ, ಪ್ರಮಾಣ ಪತ್ರ ವಿತರಣೆ
ಉಳ್ಳಾಲ : ವಿದ್ಯಾರ್ಥಿಗಳು ನಮ್ಮ ಮುಂದಿನ ಮಾರ್ಗದರ್ಶಕರಾಗಿದ್ದಾರೆ. ಅವರಿಗೆ ಶಿಕ್ಷಣದ ಮೂಲಕ ಸಮಾಜದ ಬಗ್ಗೆ ಅರ್ಥ ಮಾಡಿಕೊಳ್ಳಲು ಸಾಧ್ಯ ಆಗುತ್ತದೆ. ದೇವರ ಹೆಸರಿನಲ್ಲಿ ಪಡೆದ ಜ್ಞಾನ ಸಮಾಜದ ಬೆಳವಣಿಗೆಗೆ ಪೂರಕ ಆಗಿರುತ್ತದೆ. ಶಿಕ್ಷಣಕ್ಕಾಗಿ ನಾವು ಹೆಚ್ಚು ಒತ್ತು ನೀಡಬೇಕು ಎಂದು ಇಕ್ರಾ ಅರೆಬಿಕ್ ಕಾಲೇಜು ಅಧ್ಯಾಪಕ ಫರ್ಹಾನ್ ನದ್ವಿ ಹೇಳಿದರು.
ಅವರು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಉಳ್ಳಾಲ ಸೆಂಟರ್ ಇದರ ಆಶ್ರಯದಲ್ಲಿ ತೊಕ್ಕೊಟ್ಟು ಕಾರುಣ್ಯ ಸದನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ಜಮಾಅತ್ ಇಸ್ಲಾಮಿ ಹಿಂದ್ ಕಾರ್ಯದರ್ಶಿ ಮುಝಮ್ಮಿಲ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಐಓ ಮಾಜಿ ರಾಷ್ಟ್ರಾಧ್ಯಕ್ಷ ಲಬೀದ್ ಶಾಫಿ, ಸ್ಥಾನಿಯ ಅಧ್ಯಕ್ಷ ಅಬ್ದುಲ್ ಕರೀಂ ಮಾತನಾಡಿದರು.
ಶಾಂತಿ ಎಜುಕೇಷನಲ್ ಟ್ರಸ್ಟ್ ಚೇರ್ ಮನ್ ಎ.ಎಚ್.ಮಹ್ಮೂದ್, ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ನ ಸಂಚಾಲಕ ಅಬ್ದುಲ್ ರಹೀಂ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಮೀವಾನ್ ಮುಬೀನ್ ಕಿರಾಅತ್ ಪಠಿಸಿದರು.ಇಸ್ಹಾಕ್ ಹಸನ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರಹೀಂ ವಂದಿಸಿದರು.