ಉದ್ಯೋಗ ನೀಡುವುದಾಗಿ ಫೇಸ್‌ಬುಕ್‌ನಲ್ಲಿ ವಂಚನೆ: ಆರೋಪಿ ಸೆರೆ
ಉಡುಪಿ, ಫೆ.7: ಫೇಸ್‌ಬುಕ್‌ನಲ್ಲಿ ಉದ್ಯೋಗ ನೀಡುವುದಾಗಿ ಸಾರ್ವಜನಿಕ ರನ್ನು ನಂಬಿಸಿ, ಹಣ ವಂಚಿಸುತ್ತಿದ್ದ ಆರೋಪಿಯೊಬ್ಬನನ್ನು ಉಡುಪಿ ಸೆನ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕಾಪು ಉಳಿಯಾರಗೋಳಿ ಗ್ರಾಮದ ನಿಶಾಂತ್ ಎಸ್.ಕುಮಾರ್ ಯಾನೆ ನಿತಿನ್(21) ಬಂಧಿತ ಆರೋಪಿ.
ಬಂಧಿತನಿಂದ ಕೃತ್ಯಕ್ಕೆ ಬಳಸಿದ 7 ಲ್ಯಾಪ್ ಟಾಪ್ ಗಳು ಹಾಗೂ 1 ಮೊಬೈಲ್ ಹ್ಯಾಂಡ್ ಸೆಟ್ಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಇವುಗಳ ಮೌಲ್ಯ 1.50 ಲಕ್ಷ ರೂ. ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಮೂಲಕ ಸಾರ್ವಜನಿಕ ರನ್ನು ಸಂಪರ್ಕಿಸಿ, ಸರ್ಕಾರಿ ಉದ್ಯೋಗ ನೀಡುವುದಾಗಿ ನಂಬಿಸಿ, ಅವರಿಂದ ಹಣ ಮತ್ತು ಲ್ಯಾಪ್ ಟಾಪ್ಗಳನ್ನು ಪಡೆದು ವಂಚಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕಾರ್ಯಾಚರಣೆಯನ್ನು ಎಸ್ಪಿ ವಿಷ್ಣುವರ್ಧನ್ ನಿರ್ದೇಶನದಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಎಎಸ್ಸೈ ಕೇಶವ ಗೌಡ, ಸಿಬ್ಬಂದಿಗಳಾದ ಪ್ರಸನ್ನ ಜೀವನ್, ರಾಘವೇಂದ್ರ ಹಾಗೂ ಜೀಪು ಚಾಲಕ ನವೀನ್ ನಡೆಸಿದ್ದಾರೆ.