ಹುದಿಯನ್ನು ಉಗ್ರರ ಪಟ್ಟಿಯಿಂದ ಹೊರಗಿಟ್ಟ ಅಮೆರಿಕ

Update: 2021-02-07 16:39 GMT

 ವಾಶಿಂಗ್ಟನ್,ಫೆ.7: ಯೆಮನ್‌ನ ಹುದಿ ಬಂಡುಕೋರರನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಯಿಂದ ಹೊರಗಿಡುವ ನಿರ್ಧಾರವನ್ನು ಅಮೆರಿಕ ಶನಿವಾರ ಕೈಗೊಂಡಿದೆ. ಇದರಿಂದಾಗಿ ಯುದ್ಧಗ್ರಸ್ತ ಯೆಮನ್‌ನಲ್ಲಿ ಮಾನವೀಯ ನೆರವಿನ ಗುಂಪುಗಳು ಪರಿಹಾರ ಕಾರ್ಯಾಚರಣೆಯಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗಲಿದೆ ಎನ್ನಲಾಗಿದೆ.

ಆರು ವರ್ಷಗಳಿಂದ ನಡೆಯುತ್ತಿರುವ ಯೆಮನ್ ಸಮರದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದು ಲಕ್ಷಾಂತರ ಮಂದಿ ನಿರ್ವಸಿತರಾಗಿದ್ದು, ಇದು ಜಗತ್ತಿನ ಅತ್ಯಂತ ಘೋರವಾದ ಮಾನವೀಯ ದುರಂತವೆಂದು ವಿಶ್ವಸಂಸ್ಥೆ ಬಣ್ಣಿಸಿತ್ತು.

 ಹುದಿ ಬಂಡುಕೋರರನ್ನುಭಯೋತ್ಪಾದಕ ಗುಂಪುಗಳ ಪಟ್ಟಿಯಿಂದ ಹೊರಗಿಡುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರ ನಿರ್ಧಾರದ ಬಗ್ಗೆ ಅಮೆರಿಕ ಕಾಂಗ್ರೆಸ್‌ನಲ್ಲಿ ಔಪಚಾರಿಕವಾಗಿ ಅಧಿಸೂಚನೆಯೊಂದನ್ನು ಹೊರಡಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News