ಯಮನ್ ಯುದ್ಧ ಅಂತ್ಯದ ಬಗ್ಗೆ ಸೌದಿ ಜೊತೆ ಚರ್ಚಿಸಿದ ಅಮೆರಿಕ

Update: 2021-02-07 16:48 GMT

ವಾಶಿಂಗ್ಟನ್/ದುಬೈ, ಫೆ.7: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹಾಗೂ ಸೌದಿ ಆರೇಬಿಯದ ವಿದೇಶ ಸಚಿವ ಯುವರಾಜ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಶುಕ್ರವಾರ ಮಾತುಕತೆ ನಡೆಸಿದ್ದು, ಪ್ರಾದೇಶಿಕ ಭದ್ರತೆಯಿಂದ ಹಿಡಿದು ಮಾನವಹಕ್ಕುಗಳು ಹಾಗೂ ಯೆಮನ್ ಯುದ್ಧ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.

 ಯೆಮನ್‌ನ ಹುದಿ ಬಂಡುಕೋರರನ್ನು ಭಯೋತ್ಪಾದಕ ಗುಂಪುಗಳ ಪಟ್ಟಿಯಿಂದ ಹೊರಗಿಡಲು ತಾನು ಬಯಸಿರುವುದಾಗಿ ಅಮೆರಿಕ ಘೋಷಿಸಿದ ದಿನವೇ ಉಭಯದೇಶಗಳ ವಿದೇಶಾಂಗ ಸಚಿವರ ನಡುವೆ ಮಾತುಕತೆ ನಡೆದಿರುವುದು ಹೆಚ್ಚಿನ ಮಹತ್ವ ಪಡೆದಿದೆ.

 ಮಾನವಹಕ್ಕುಗಳ ವಿಷಯಗಳಿಗೆ ಮಹತ್ವ ನೀಡುವುದು ಹಾಗೂ ಯೆಮನ್ ಯುದ್ಧವನ್ನು ಕೊನೆಗೊಳಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿದೇಶಾಂಗ ಕಾರ್ಯದರ್ಶಿಯವರು ಸೌದಿ ವಿದೇಶ ಸಚಿವರ ಜೊತೆಗೆ ನಡೆದ ಮಾತುಕತೆಯಲ್ಲಿ ಚರ್ಚಿಸಿದ್ದಾರೆಂದು, ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News