×
Ad

ವಿದ್ಯಾರ್ಥಿ ಆತ್ಮಹತ್ಯೆ

Update: 2021-02-08 23:28 IST

ಬಂಟ್ವಾಳ : ಶಂಭೂರು ಸರಕಾರಿ ಪ್ರೌಢಶಾಲೆಯ ಒಂಭನೇ ತರಗತಿಯ ವಿದ್ಯಾರ್ಥಿಯೋರ್ವ ಮನೆಯಲ್ಲಿ ಬೈದರು ಎಂಬ ಕಾರಣಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಳ್ತಿಲ ಗ್ರಾಮದ ಚೆರ್ಕಳದಲ್ಲಿ ನಡೆದಿದೆ.

ಚೆರ್ಕಳ ನಿವಾಸಿ ಹರ್ಷಿತ್ (14) ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದು, ಜಾತ್ರೆಯಿಂದ ಮನೆಗೆ ತಡವಾಗಿ ಬಂದಿರುವುದಲ್ಲದೆ ತಂಗಿಗೆ ಐಸ್ ಕ್ರೀಂ ತಂದಿರಲಿಲ್ಲ. ಈ ಕಾರಣಕ್ಕೆ ಮನೆಯಲ್ಲಿ ಬೈದಿದ್ದು, ಇದೇ ಕಾರಣದಿಂದ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಈತ ಈ ಹಿಂದೆಯೂ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ  ಎಂದು ದೂರಲಾಗಿದೆ.

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News