ಅಮೆರಿಕದ ಯುದ್ಧನೌಕೆಗಳಿಂದ ದಕ್ಷಿಣ ಚೀನಾ ಸಮುದ್ರದಲ್ಲಿ ಯುದ್ಧಾಭ್ಯಾಸ

Update: 2021-02-09 15:01 GMT

ವಾಶಿಂಗ್ಟನ್, ಫೆ. 9: ಅಮೆರಿಕದ ಎರಡು ವಿಮಾನವಾಹಕ ಯುದ್ಧನೌಕೆಗಳು ಮಂಗಳವಾರ ದಕ್ಷಿಣ ಚೀನಾ ಸಮುದ್ರದಲ್ಲಿ ಯುದ್ಧಾಭ್ಯಾಸ ನಡೆಸಿವೆ. ವಿವಾದಾಸ್ಪದ ಜಲಪ್ರದೇಶದ ಸಮೀಪದಲ್ಲಿರುವ ಚೀನಾ ನಿಯಂತ್ರಿಕ ದ್ವೀಪಗಳ ಸಮೀಪ ಅಮೆರಿಕದ ಯುದ್ಧನೌಕೆಯೊಂದು ಹಾದು ಹೋದ ದಿನಗಳ ಬಳಿಕ ಯುದ್ಧಾಭ್ಯಾಸ ನಡೆದಿದೆ.

ತಿಯೋಡೋರ್ ರೂಸ್‌ವೆಲ್ಟ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಮತ್ತು ನಿಮಿಟ್ಝ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್‌ಗಳು ತಮ್ಮ ಅಂತರ್ ಕಾರ್ಯಾಚರಣೆ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಹಲವಾರು ಯುದ್ಧ ಕಸರತ್ತುಗಳನ್ನು ನಡೆಸಿದವು ಎಂದು ಅವೆುರಿಕ ನೌಕಾಪಡೆ ಹೇಳಿದೆ.

ಅಮೆರಿಕದ ಯುಎಸ್‌ಎಸ್ ಜಾನ್ ಎಸ್. ಮೆಕೇನ್ ಯುದ್ಧನೌಕೆಯು ಚೀನಾ ನಿಯಂತ್ರಣದ ಪಾರಾಸೆಲ್ ದ್ವೀಪಗಳ ಸಮೀಪ ಹಾದು ಹೋಗಿರುವುದನ್ನು ಚೀನಾ ಈಗಾಗಲೇ ಖಂಡಿಸಿದೆ. ತಾನು ತನ್ನ ನೌಕಾಯಾನ ಸ್ವಾತಂತ್ರದ ಹಕ್ಕನ್ನಷ್ಟೇ ಚಲಾಯಿಸಿರುವುದಾಗಿ ಅಮೆರಿಕ ತನ್ನ ನಡೆಗೆ ಸ್ಪಷ್ಟೀಕರಣ ನೀಡಿದೆ.

ಈಗ ಈ ವಿವಾದಿತ ಜಲಪ್ರದೇಶದಲ್ಲಿ ಅಮೆರಿಕವು ಹೊಸದಾಗಿ ಯುದ್ಧಾಭ್ಯಾಸ ನಡೆಸಿರುವುದು ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸುವ ಎಲ್ಲ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News