ಮೊಂಟೆಪದವು: ಎಂಪಿಎಲ್ ಸೀಸನ್ 3; ಕುವೈತ್ ಸ್ಟ್ರೈಕರ್ಸ್ ಚಾಂಪಿಯನ್

Update: 2021-02-09 18:15 GMT

ಮುಡಿಪು : ಮೊಂಟೆಪದವಿನಲ್ಲಿ 'ಎಸಿಆರ್-2021' ವತಿಯಿಂದ ಮೂರು ದಿನಗಳ ಎಂಪಿಎಲ್ ಮೊಂಟೆಪದವು ಸೀಸನ್ 3 ಕ್ರಿಕೆಟ್ ಪಂದ್ಯಾಟದಲ್ಲಿ ರಫೀಕ್ ಮೊಂಟೆಪದವು ಮತ್ತು ಶರೀಫ್ ಕೆಎ ಅವರ ಮಾಲಕತ್ವದ ಕುವೈತ್ ಸ್ಟ್ರೈಕರ್ಸ್ ತಂಡ ಚಾಂಪಿಯನ್ ಆಗಿದೆ.

ಮಜೀದ್ ಅವರ ಮಾಲಕತ್ವದ ತಂಡ ಎಂ ಕ್ಲಬ್ ರನ್ನರ್ಸ್ ಆಗಿ ಹೊರಹೊಮ್ಮಿತು.

ಸಮಾರೋಪ ಸಮಾರಂಭದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು. ವೀಕ್ಷಕ ವಿವರಣೆಗಾರರಾಗಿ ರಝಾಕ್ ಸಾಲ್ಮರ್ ಮತ್ತು ನಾಸಿರ್ ಕನ್ಯಾನ  ಭಾಗವಹಿಸಿದ್ದರು.

ಹಿರಿಯ ಕ್ರೀಡಾಪಟ್ಟು  ಪ್ರಕಾಶ್ ಹೂಹಾಕುವ ಕಲ್ಲು ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಮೊಂಟೆಪದವಿನಲ್ಲಿ ಸತತವಾಗಿ 3 ವರ್ಷಗಳಿಂದ ಯಶಸ್ವಿಯಾಗಿ ಕ್ರೀಡಾಕೂಟ ನಡೆಸುತ್ತಿರುವ ಎಸಿಆರ್ ಗ್ರೂಪಿನ ಆಯೋಜಕರಾದ ಆರಿಫ್ ಮೊಂಟೆಪದವು, ಶಾನವಾಝ್ ಮೊಂಟೆಪದವು, ರಶೀದ್ ಮಲಾರ್, ರಝಾಕ್ ಮೊಂಟೆಪದವು ಮತ್ತು ಮುವಾಝ್ ಅವರನ್ನು ಈ ಸಂದರ್ಭ ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News