×
Ad

'ಕೂ' ಸಾಮಾಜಿಕ ತಾಣದಲ್ಲಿ ಬಳಕೆದಾರರ ಮಾಹಿತಿ ಸುಲಭವಾಗಿ ಸೋರಿಕೆಯಾಗುತ್ತದೆ: ಫ್ರೆಂಚ್ ಭದ್ರತಾ ಸಂಶೋಧಕ

Update: 2021-02-11 13:04 IST

ಹೊಸದಿಲ್ಲಿ : ಭಾರತೀಯ ಭಾಷೆಗಳಲ್ಲಿ ಟ್ವಿಟ್ಟರ್ ರೀತಿಯ ಅನುಭವವನ್ನು ನೀಡುವ ಭಾರತೀಯ ಮೈಕ್ರೋಬ್ಲಾಗಿಂಗ್ ಆ್ಯಪ್ `ಕೂ' ಸರಕಾರದ ಹಾಗೂ ಟ್ವಿಟ್ಟರ್ ನಡುವಿನ ಸಮರದ ನಂತರ ಮತ್ತೆ ಸುದ್ದಿಯಲ್ಲಿದೆ. ಈ ನಡುವೆ  ಕೂ  ತಾಣದಲ್ಲಿ ಬಳಕೆದಾರರ  ವೈಯಕ್ತಿಕ ಮಾಹಿತಿ ಸುಲಭವಾಗಿ ಸೋರಿಕೆಯಾಗುತ್ತಿದೆ ಎಂದು ಫ್ರೆಂಚ್ ಸೆಕ್ಯುರಿಟಿ ಸಂಶೋಧಕ ರಾಬರ್ಟ್ ಬ್ಯಾಪ್ಟಿಸ್ಟ್  ಹೇಳಿಕೊಂಡಿದ್ದಾರೆ. 

ಈಲಿಯಟ್ ಆಂಡರ್ಸನ್ ಎಂಬ ಹೆಸರಿನಿಂದ ಟ್ವಿಟ್ಟರ್‍ನಲ್ಲಿ ಗುರುತಿಸಲ್ಪಡುವ ಅವರು ತಾವು ಕೆಲ ಟ್ವಿಟ್ಟರಿಗರ ಮನವಿಯಂತೆ ಕೂ ತಾಣದಲ್ಲಿ 30 ನಿಮಿಷಗಳನ್ನು ಕಳೆದಿದ್ದು ಅದು ಬಳಕೆದಾರರ  ಮಾಹಿತಿಗಳಾದ ಹೆಸರು, ಇಮೇಲ್ ವಿಳಾಸ, ಲಿಂಗ, ವೈವಾಹಿಕ ಸ್ಥಾನಮಾನ ಮತ್ತಿತರ ವಿಚಾರಗಳನ್ನು ಸುಲಭವಾಗಿ ತಿಳಿಯುವಂತೆ ಮಾಡುತ್ತದೆ ಎಂದು ಟ್ವಿಟ್ಟರ್‍ನಲ್ಲಿ ಸ್ಕ್ರೀನ್ ಶಾಟ್‍ಗಳನ್ನು ಪೋಸ್ಟ್ ಮಾಡುವ ಮೂಲಕ ವಿವರಿಸಿದ್ದಾರೆ. ಜತೆಗೆ ಕೂ ಡೊಮೇನ್ ಅಮೆರಿಕಾದಲ್ಲಿ ನೋಂದಣಿಯಾಗಿದೆ ಹಾಗೂ ಅದನ್ನು ನೋಂದಣಿ ಮಾಡಿದವರು ಚೀನಾದಲ್ಲಿದ್ದಾರೆಂಬ ಮಾಹಿತಿಯನ್ನೂ ಬ್ಯಾಪ್ಟಿಸ್ಟ್ ನೀಡಿದ್ದಾರೆ.

ಭಾರತೀಯ ಟ್ವಿಟ್ಟರ್ ಎಂದೇ ಕರೆಯಲ್ಪಡುವ ಕೂ ತಾಣವನ್ನು ಸರಕಾರಿ ಅಧಿಕಾರಿಗಳು ಹಾಗೂ ಕೇಂದ್ರ ಸಚಿವರು  ಬಹಳಷ್ಟು ಪ್ರೋತ್ಸಾಹಿಸುತ್ತಿದ್ದಾರೆ. ಅದು ಡೆಸ್ಕ್ ಟಾಪ್, ಐಒಎಸ್ ಹಾಗೂ ಆಂಡ್ರಾಯ್ಡ್‍ನಲ್ಲೂ ಲಭ್ಯವಿದ್ದು  ಕಳೆದ ವರ್ಷ ಸರಕಾರದ ಡಿಜಿಟಲ್ ಇಂಡಿಯಾ ಆತ್ಮನಿರ್ಭರ್ ಭಾರತ್ ಇನ್ನೊವೇಟ್ ಚ್ಯಾಲೆಂಜ್ ಪ್ರಶಸ್ತಿಯನ್ನೂ ಗೆದ್ದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News