×
Ad

ʼನಾವಿಬ್ಬರು, ನಮಗಿಬ್ಬರುʼ ಎಂಬಂತೆ ದೇಶವನ್ನು ನಾಲ್ಕು ಜನರು ಮುನ್ನಡೆಸುತ್ತಿದ್ದಾರೆ: ರಾಹುಲ್‌ ಗಾಂಧಿ ಹೇಳಿಕೆ

Update: 2021-02-11 19:03 IST

ಹೊಸದಿಲ್ಲಿ: "ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶವನ್ನು “ಹಮ್ ದೋ, ಹಮಾರೆ ದೋ’(ನಾವಿಬ್ಬರು, ನಮಗಿಬ್ಬರು)ತತ್ವದ ಮೇಲೆ ಮುನ್ನಡೆಸುತ್ತಿದ್ದಾರೆ'' ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ವಾಗ್ದಾಳಿ ನಡೆಸಿದರು.

"ನೋಟು ನಿಷೇಧ, ಸರಕು ಹಾಗೂ ಸೇವಾ ತೆರಿಗೆ(ಜಿಎಸ್ ಟಿ), ಲಾಕ್ ಡೌನ್ ಹಾಗೂ ತೀರಾ ಇತ್ತೀಚೆಗೆ ಸೆಪ್ಟಂಬರ್ ನಲ್ಲಿ ಜಾರಿಗೊಳಿಸಲ್ಪಟ್ಟ ಮೂರು ಕೃಷಿ ಕಾನೂನುಗಳಲ್ಲಿ ಈ ತತ್ವವನ್ನೇ ಅನುಸರಿಸಲಾಗಿದೆ. ‘ಹಮ್ ದೋ, ಹಮಾರೆ ದೋ’ಎಂಬ ಘೋಷಣೆಯನ್ನು ನಾವು ಕುಟುಂಬ ಯೋಜನೆಗೆ ಬಳಸಿರುವುದನ್ನು ನೀವೆಲ್ಲರೂ  ನೆನಪಿಟ್ಟುಕೊಳ್ಳಬೇಕು. ಕೇಂದ್ರ ಸರಕಾರವು ಈ ಘೋಷಣೆಗೆ ಈಗ ಹೊಸ ಅರ್ಥವನ್ನು ನೀಡಿದೆ. ದೇಶವನ್ನು ನಾಲ್ಕು ಜನರು ಮುನ್ನಡೆಸುತ್ತಿದ್ದಾರೆ. “ಹಮ್ ದೋ ಔರ್ ಹಮಾರೆ ದೋ’’ ಆಗಿದೆ ಎಂದರು.

"ಕೃಷಿ ಕಾನೂನುಗಳು ರೈತರನ್ನು ಹಾಳು ಮಾಡುವುದಲ್ಲದೆ, ಮಧ್ಯವರ್ತಿಗಳನ್ನು ನಾಶಪಡಿಸಿ, ಸಣ್ಣ ವ್ಯಾಪಾರಿಗಳು, ಸಣ್ಣ ಉದ್ಯಮಿಗಳ ಮೇಲೆ ವಿನಾಶಕಾರಿ ಪರಿಣಾಮಬೀರುತ್ತವೆ. ಇದು ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಭಾರೀ ಹೊಡೆತ ನೀಡಲಿದ್ದು, ಇದು ಭಾರತದ ಗ್ರಾಮೀಣ ಆರ್ಥಿಕತೆಯನ್ನು ನಾಶಪಡಿಸುತ್ತದೆ. ಭಾರತಕ್ಕೆ ಬೆಳವಣಿಗೆಯಾಗಲು, ಉದ್ಯೋಗವನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ..ಏಕೆಂದರೆ ಹಮ್ ದೋ, ಹಮಾರೆ ದೋ ಲಾಭಕ್ಕಾಗಿ ನಮ್ಮ ರಾಷ್ಟ್ರದ ಬೆನ್ನೆಲುಬು ನಾಶವಾಗಲಿದೆ'' ಎಂದು ರಾಹುಲ್ ಆತಂಕವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News