ಕುಂದಾಪುರಕ್ಕೆ ಖಾಯಂ ನಿರೀಕ್ಷಕರಿಗಾಗಿ ಆಗ್ರಹ
Update: 2021-02-11 19:42 IST
ಕುಂದಾಪುರ, ಫೆ.11: ಕುಂದಾಪುರ ಕಾರ್ಮಿಕ ಇಲಾಖೆಯಲ್ಲಿ ಕಳೆದ ಎಂಟು ತಿಂಗಳಿನಿಂದ ಕಾರ್ಮಿಕ ನಿರೀಕ್ಷಕರ ಹುದ್ದೆ ಖಾಲಿಯಾಗಿದ್ದು, ಇದರಿಂದ ಜಿಲ್ಲೆಯ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ ಎಂದು ಸಿಐಟಿಯುವ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ತಿಳಿಸಿದ್ದಾರೆ.
ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ಮನವಿ ನೀಡಿದರೂ ಸರಕಾರ ಯಾವುದೇ ಸ್ಪಂದನೆಯನ್ನು ತೋರಿಸಿಲ್ಲ. ಖಾಯಂ ಡಾಟಾ ಎಂಟ್ರಿದಾರರೂ ಇಲ್ಲದಿರುವುದರಿಂದ ಸಹ ಕಾರ್ಮಿಕರಿಗೆ ಸಮಸ್ಯೆಗಳಾ ಗುತ್ತಿವೆ.
ಆದುದರಿಂದ ಸರಕಾರ ಈ ಕೂಡಲೇ ಖಾಯಂ ನಿರೀಕ್ಷಕರು ಹಾಗೂ ಡಾಟಾ ಎಂಟ್ರಿ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ಸಿಐಟಿಯು ಒತ್ತಾಯಿಸಿದೆ.