ಕೋವಿಡ್‌ ಲಸಿಕೆ ನೀಡಿಕೆ ಮುಗಿದ ಕೂಡಲೇ ಸಿಎಎ ಅನುಷ್ಠಾನ ಪ್ರಾರಂಭವಾಗಲಿದೆ: ಅಮಿತ್‌ ಶಾ

Update: 2021-02-11 16:07 GMT

ಠಾಕೂರ್‌ ನಗರ: ಕೋವಿಡ್ ಲಸಿಕೆ ನೀಡಿದೆ ಪ್ರಕ್ರಿಯೆ ಮುಗಿದ ನಂತರ ಪಶ್ಚಿಮ ಬಂಗಾಳದ ಮಾಟುವಾ ಸಮುದಾಯವೂ ಸೇರಿದಂತೆ ಸಿಎಎ ಅಡಿಯಲ್ಲಿ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ತಿಳಿಸಿದ್ದಾರೆ. ಪೌರತ್ವ (ತಿದ್ದುಪಡಿ) ಕಾಯ್ದೆಯ ಬಗ್ಗೆ ವಿರೋಧ ಪಕ್ಷಗಳು ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸಿವೆ ಎಂದು ಆರೋಪಿಸಿದ ಅವರು, ಇದರ ಅನುಷ್ಠಾನವು ಭಾರತೀಯ ಅಲ್ಪಸಂಖ್ಯಾತರ ಪೌರತ್ವ ಸ್ಥಾನಮಾನದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

"ಹೊಸ ಪೌರತ್ವ ಕಾನೂನನ್ನು ತರುವುದಾಗಿ 2018ರಲ್ಲಿ ಮೋದಿ ಸರ್ಕಾರ ಭರವಸೆ ನೀಡಿತ್ತು ಮತ್ತು 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅದನ್ನು ಉಳಿಸಿಕೊಂಡಿದೆ" ಎಂದು ಶಾ ಹೇಳಿದರು. 2020 ರಲ್ಲಿ ದೇಶವು ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ತುತ್ತಾದ ನಂತರ, ಅದರ ಅನುಷ್ಠಾನದಲ್ಲಿ ವ್ಯತ್ಯಯವಾಯಿತು ಎಂದು ಹೇಳಿದರು.

"ನಾವು ಸುಳ್ಳು ಭರವಸೆ ನೀಡಿದ್ದೇವೆ ಎಂದು ಮಮತಾ ದೀದಿ ಹೇಳುತ್ತಾರೆ. ಅವರು ಸಿಎಎಯನ್ನು ವಿರೋಧಿಸಲು ಪ್ರಾರಂಭಿಸಿದರು ಮತ್ತು ಅವರು ಅದನ್ನು ಎಂದಿಗೂ ಅನುಮತಿಸುವುದಿಲ್ಲ ಎಂದು ಹೇಳಲು ಪ್ರಾರಂಭಿಸಿದರು. ಬಿಜೆಪಿ ಯಾವಾಗಲೂ ನೀಡುವ ಭರವಸೆಗಳನ್ನು ಈಡೇರಿಸುತ್ತದೆ. ನಾವು ಈ ಕಾನೂನನ್ನು ತಂದಿದ್ದೇವೆ ಮತ್ತು ನಿರಾಶ್ರಿತರಿಗೆ ಪೌರತ್ವ ಸಿಗುತ್ತದೆ. "ಕೋವಿಡ್ ವ್ಯಾಕ್ಸಿನೇಷನ್ ಪ್ರಕ್ರಿಯೆಯು ಮುಗಿದ ತಕ್ಷಣ ಸಿಎಎ ಅಡಿಯಲ್ಲಿ ಪೌರತ್ವ ನೀಡುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ" ಎಂದು ಅವರು ಹೇಳಿದರು, ಮಾಟುವಾ ಸಮುದಾಯದ ಭದ್ರಕೋಟೆಯಾಗಿರುವ ಪ್ರದೇಶದಲ್ಲಿ ಅವರು ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News