ಜೋಸೆಫ್ ಕ್ರಾಸ್ತಾ ಅವರ ಆತ್ಮಚರಿತ್ರೆ ಬಿಡುಗಡೆ
Update: 2021-02-11 20:41 IST
ಮಂಗಳೂರು, ಫೆ.11: ಸ್ನೇಹಾಲಯದ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಜೋಸೆಫ್ ಕ್ರಾಸ್ತಾ ಅವರ ಜೀವನ ಚರಿತ್ರೆ ‘ಮ್ಯಾನ್ ವಿಥ್ ಎ ಮಿಷನ್’ ಕೃತಿ ಬಿಡುಗಡೆಯು ಬುಧವಾರ ನಗರದ ಬಿಷಪ್ ಹೌಸ್‌ನಲ್ಲಿ ಜರುಗಿತು.
ಜಿಯೋ ಡಿಸಿಲ್ವ ಮತ್ತು ಸ್ವರೂಪ್ ವಿ. ಅಮೀನ್ ಜಂಟಿಯಾಗಿ ಬರೆದು ಸಂಪಾದಿಸಲಾದ ಈ ಕೃತಿಯನ್ನು ಮಂಗಳೂರಿನ ಬಿಷಪ್ ರೆ.ಡಾ. ಪೀಟರ್ ಪೌಲ್ ಸಲ್ದಾನ್ಹಾ ಬಿಡುಗಡೆಗೊಳಿಸಿದರು.
ಮಂಗಳೂರು ಡಯಾಸಿಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ಟೆಲಿನೊ, ಫೆಲ್ಸಿ ಲೋಬೊ ಉಪಸ್ಥಿತರಿದ್ದರು. ಲೇಖಕ ಜಿಯೋ ಡಿಸಿಲ್ವಾ ಸ್ವಾಗತಿಸಿದರು. ಸಮಾಜ ಸೇವಕ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.